February 11, 2026
Wednesday, February 11, 2026
spot_img

ಆಸ್ಟ್ರೇಲಿಯಾ ತಂಡಕ್ಕೆ ‘ಬೆಂಬಿಡದ ಭೂತ’ವಾದ ಗಾಯದ ಸಮಸ್ಯೆ: ಮಿಚೆಲ್ ಮಾರ್ಷ್ ಔಟ್, ಸ್ಟೀವ್ ಗೆ ಬುಲಾವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ ಆರಂಭದಲ್ಲೇ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಶಾಕ್ ಎದುರಾಗಿದೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನವೇ ನಾಯಕ ಮಿಚೆಲ್ ಮಾರ್ಷ್ ಗಾಯಗೊಂಡಿದ್ದು, ಅವರು ಕಣಕ್ಕಿಳಿಯಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ಅಭ್ಯಾಸದ ವೇಳೆ ಚೆಂಡು ಹೊಟ್ಟೆ ಭಾಗಕ್ಕೆ ತಗುಲಿದ ಪರಿಣಾಮ ಮಾರ್ಷ್ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಟಿಮ್ ಡೇವಿಡ್ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸಂದರ್ಭದಲ್ಲೇ ಮತ್ತೊಂದು ಪ್ರಮುಖ ಆಟಗಾರ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮಾರ್ಷ್ ಚೇತರಿಕೆಗೆ ಇನ್ನೂ ಸಮಯ ಬೇಕಾಗಬಹುದು ಎಂದು ಹೇಳಲಾಗಿದ್ದು, ಮುಂದಿನ ಪಂದ್ಯಗಳಲ್ಲಿ ಅವರು ಆಡೋದು ಅನುಮಾನವಾಗಿದೆ.

ಇದನ್ನೂ ಓದಿ:

ಅವರ ಸ್ಥಾನಕ್ಕೆ ಅನುಭವಿ ಸ್ಟೀವ್ ಸ್ಮಿತ್ ಅವರನ್ನು ಮೀಸಲು ಆಟಗಾರನಾಗಿ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇತ್ತೀಚಿನ ಬಿಗ್ ಬ್ಯಾಷ್ ಲೀಗ್‌ನಲ್ಲಿ ಉತ್ತಮ ಫಾರ್ಮ್ ತೋರಿದ ಸ್ಮಿತ್ ಅಗತ್ಯವಿದ್ದರೆ ತಂಡಕ್ಕೆ ಸೇರುವ ಸಾಧ್ಯತೆ ಇದೆ.

ಮಾರ್ಷ್ ಅನುಪಸ್ಥಿತಿಯಲ್ಲಿ ಐರ್ಲೆಂಡ್ ವಿರುದ್ಧ ಟ್ರಾವಿಸ್ ಹೆಡ್ ನಾಯಕತ್ವ ವಹಿಸಿಕೊಂಡಿದ್ದಾರೆ. ಪ್ರಮುಖ ಆಟಗಾರರ ಗಾಯದಿಂದ ಆಸ್ಟ್ರೇಲಿಯಾ ತಂಡದ ಸಮತೋಲನಕ್ಕೆ ಸವಾಲು ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !