Friday, August 19, 2022

Latest Posts

T20 World Cup | ಶ್ರಿಲಂಕಾಕ್ಕೆ 172 ರನ್​ಗಳ ಟಾರ್ಗೆಟ್​ ನೀಡಿದ ಬಾಂಗ್ಲಾದೇಶ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟಿ 20 ವಿಶ್ವಕಪ್ ಎರಡನೇ ದಿನವಾದ ಇಂದು ಶ್ರಿಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಟಾಸ್​ ಸೋತು ಬ್ಯಾಟಿಂಗ್​​ ಇಳಿದ ಬಾಂಗ್ಲಾ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​​ ಕಳೆದುಕೊಂಡು 171 ರನ್​ ಗಳಿಸಿದ್ದು, ಲಂಕಾ ತಂಡಕ್ಕೆ 172ರನ್​ಗಳ ಟಾರ್ಗೆಟ್​ ನೀಡಿದೆ.
ಬಾಂಗ್ಲಾ ಪರ ಓಪನರ್​ ಆಗಿ ಕಣಕ್ಕಿಳಿದ ಲಿಟನ್​ ದಾಸ್​ ಮತ್ತು ಮೊಹಮ್ಮದ್ ನೈಮ್ ಜೋಡಿ 5.5 ಓವರ್​ಗಳಲ್ಲಿ 40 ರನ್​​ಗಳಿಸಿತು. 16 ರನ್​​ ಗಳಿಸಿದ್ದಾಗ ಲಿಟನ್​ ದಾಸ್,​ ಲಹಿರು ಕುಮಾರಗೆ ವಿಕೆಟ್​ ಒಪ್ಪಿಸಿದರು.
ನಂತರ ಬಂದ ಶಕೀಬ್ ಅಲ್ ಹಸನ್ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಕೇವಲ 10 ರನ್​ಗಳಿಸಿ ಔಟಾದರು. ನಂತರ ಬಂದ ಅನುಭವಿ ಬ್ಯಾಟರ್​ ಮುಷ್ಫಿಕರ್ ರಹೀಮ್, ಮೊಹಮ್ಮದ್ ನೈಮ್ ಜೊತೆ ಸೇರಿ ಉತ್ತಮ ರನ್​​ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
ಮೊಹಮ್ಮದ್ ನೈಮ್ 62 ರನ್​ಗಳಿಸಿ ಫರ್ನಾಂಡೊಗೆ ವಿಕೆಟ್​ ಒಪ್ಪಿಸಿದರು.ನಂತರ ಬಂದ ಅಫೀಫ್ ಹೊಸೇನ್ ಕೇವಲ 7 ರನ್​ಗಳಿಸಿ ನಿರ್ಗಮಿಸಿದರು. ಆ ನಂತರ ಬಂದ ನಾಯಕ ಮಹ್ಮದುಲ್ಲಾ 10* ರನ್​ಗಳಿಸಿ ತಂಡಕ್ಕೆ ತಮ್ಮದೆ ಆದ ಕೊಡುಗೆ ನೀಡಿದರು. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಹೀಮ್​​ (57)* ಅಂತಿಮ ಹಂತದವರೆಗೂ ತಂಡಕ್ಕೆ ನೇರವಾದರು.
ಇನ್ನೂ ಶ್ರೀಲಂಕಾ ಪರ ಫರ್ನಾಂಡೊ, ಲಹಿರು ಕುಮಾರ, ಚಮಿಕ ಕರುಣರತ್ನೆ ತಲಾ ಒಂದು ವಿಕೆಟ್​​ ಪಡೆದು ಮಿಂಚಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!