ಟಿ 20 ವಿಶ್ವಕಪ್‌ ನಲ್ಲಿ ಮತ್ತೊಂದು ಅಚ್ಚರಿ: ಕ್ರಿಕೆಟ್‌ ಶಿಶು ಸ್ಕಾಟ್ಲೆಂಡ್ ವಿರುದ್ಧ ಹೀನಾಯ ಸೋಲುಂಡ ವೆಸ್ಟ್ ಇಂಡೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಆರಂಭಿಕ ಪಂದ್ಯಗಳೇ ಅಚ್ಚರಿಯ ಫಲಿತಾಂಶವನ್ನು ಸೃಷ್ಟಿಸುತ್ತಿವೆ.
ನಿನ್ನೆ ನಡೆದ ಉದ್ಘಾಟನಾ ಪಂದ್ಯದಲ್ಲಿ ಏಷ್ಯನ್ ಚಾಂಪಿಯನ್​ ಶ್ರೀಲಂಕಾ ಕ್ರಿಕೆಟ್‌ ಶಿಶು ನಮೀಬಿಯಾ ವಿರುದ್ಧ ಅಚ್ಚರಿಯ ಸೋಲುಂಡಿತ್ತು. ಇದೀಗ ಮತ್ತೊಂದು ಪಂದ್ಯದಲ್ಲಿ 2 ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ನರಾದ ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್ ಗೆದ್ದು ಬೀಗಿದೆ.
ಹೋಬಾರ್ಟ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ಸ್ಕಾಟ್ಲೆಂಡ್‌ ತಂಡವನ್ನು ಮೊದಲು ಬ್ಯಾಟಿಂಗ್‌ ಗೆ ಆಹ್ವಾನಿಸಿದ್ದರು. ಸ್ಕಾಟ್ಲೆಂಡ್ ಪರ ಆಂಭಿಕ ಆರಂಭಿಕ ಆಟಗಾರರಾದ ಮುನ್ಸೆ ಹಾಗೂ ಜಾನ್ಸ್ ಮೊದಲ ವಿಕೆಟ್​ಗೆ 55 ರನ್​ಗಳನ್ನು ಜೋಡಿಸಿದರು. ಆ ಬಳಿಕವೂ ಉತ್ತಮ ಆಟವಾಡಿದ ಮುನ್ಸೆ ಅರ್ಧಶತಕ ಸಿಡಿಸಿದರು.53 ಎಸೆತಗಳಲ್ಲಿ 9 ಫೋರ್​ನೊಂದಿಗೆ ಅಜೇಯ 66 ರನ್ ಬಾರಿಸಿ ತಂಡವನ್ನು 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರ ಗಡಿ ಮುಟ್ಟಿಸಿದರು.

161 ರನ್​ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಿಂದಲೇ ತಿಣುಕಾಡುತ್ತ ಸಾಗಿತು. ಆರಂಭಿಕರಾದ ಕೈಲ್ ಮೇಯರ್ಸ್ (20), ಎವಿನ್ ಲೂಯಿಸ್ (14) ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಆ ಬಳಿಕ ಬ್ರೆಂಡನ್ ಕಿಂಗ್ (17), ನಾಯಕ ನಿಕೋಲಾಸ್‌ ಪೂರನ್‌ (4), ಶಮರ್ ಬ್ರೂಕ್ಸ್​ (4), ರೋವ್​ಮನ್ ಪೊವೆಲ್ (5) ನೀರಸ ಪ್ರದರ್ಶನ ತೋರಿದರು.
84 ರನ್‌ ಗೆ 8 ವಿಕೆಟ್‌ ಕಳೆದುಕೊಂಡಿದ್ದ ವೆಸ್ಟ್‌ ಇಂಡೀಸ್‌ ಆ ಬಳಿಕ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಂತಿಮವಾಗಿ 118 ರನ್‌ಗಳಿಗೆ ಆಲೌಟ್ ಆಯ್ತು. 42 ರನ್‌ಗಳ ಭರ್ಜರಿ ಜಯದೊಂದಿಗೆ ಸ್ಕಾಟ್ಲೆಂಡ್‌ ಗ್ರೂಪ್‌ ಬಿ ಫೇವರಿಟ್‌ ವೆಸ್ಟ್‌ ಇಂಡೀಸ್‌ ಭಾರೀ ಆಘಾತ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!