ಟಿ 20 ವಿಶ್ವಕಪ್: ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಬಾಂಗ್ಲಾದೇಶದ ಸೆಮೀಸ್ ಹಾದಿ ಸುಗಮವಾಗಲು ಇಂದಿನ ಪಂದ್ಯ ಭಾರೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಭರ್ಜರಿ ತಯಾರಿ ನಡೆಸಿದೆ.

ಭಾರತ ಮೊದಲೆರೆಡು ಪಂದ್ಯ ಗೆದ್ದಿದೆ, ದಕ್ಷಿಣ ಆಫ್ರಿಕಾದೆದುರು ತಂಡ ಸೋಲು ಅನುಭವಿಸಿದ್ದು, ಬಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾ ಮೂರನೇ ಸ್ಥಾನದಲ್ಲಿದೆ.

ಇಂಡೋ-ಬಾಂಗ್ಲಾ ಕದನ ಅಡಿಲೇಡ್‌ನ ಓವಲ್ ಮೈದಾನದಲ್ಲಿ ನಡೆಯಲಿದ್ದು, ಆಟಗಾರರು ತಾಲೀಮಿನಲ್ಲಿ ನಿರತರಾಗಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಕಂಡರೆ ಸೆಮೀಸ್ ಆಸೆ ಗಟ್ಟಿಯಾಗಲಿದೆ, ಸೋತರೆ ಮುಂದಿನ ಹಂತಕ್ಕೆ ತೆರಳುವ ಹಾದಿ ಕಷ್ಟವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!