Thursday, August 11, 2022

Latest Posts

T20 World Cup | ದಕ್ಷಿಣ ಆಫ್ರಿಕಾಕ್ಕೆ 144 ರನ್​ ಟಾರ್ಗೆಟ್ ನೀಡಿದ ವೆಸ್ಟ್​ ಇಂಡೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಟಿ-20 ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್​ ಇಂಡೀಸ್ ನಡುವಿನ ಪಂದ್ಯದಲ್ಲಿ ವಿಂಡೀಸ್ ತಂಡ 8 ವಿಕೆಟ್​ ಕಳೆದುಕೊಂಡು 143 ರನ್​ ಕಲೆಹಾಕಿದೆ.
ವಿಂಡೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಲಿಂಡ್ಲ ಸಿಮನ್ಸ್ ಹಾಗೂ ಇವಿನ್ ಲೆವಿಸ್ ನಿಧಾನಗತಿಯ ಆರಂಭ ನೀಡಿದರು. ಆದರೆ, ಸಿಮನ್ಸ್ ನಿಧಾನ ಗತಿಯ ಬ್ಯಾಟಿಂಗ್ ನಡೆಸಿ 35 ಬಾಲ್​ನಲ್ಲಿ ಕೇವಲ 16 ರನ್​ ಗಳಿಸಿದರು. ಆದರೆ, ಇನ್ನೋರ್ವ ಆಟಗಾರ ಲೆವಿಸ್ ಅಬ್ಬರದ ಬ್ಯಾಟಿಂಗ್ ನಡೆಸಿ 35 ಎಸೆತದಲ್ಲಿ 6 ಸಿಕ್ಸರ್, 3 ಬೌಂಡರಿ ನೆರವಿನಿಂದ 56 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ನಂತರ ಕ್ರೀಸ್​​ಗಳಿದ ಪೂರನ್ 12 (7), ಕ್ರಿಸ್ ಗೇಲ್ 12 (12),​ ಆಂಡ್ರೆ ರಸೆಲ್ 5 (4), ಶಿಮ್ರಾನ್ ಹೆಟ್ಮಾಯರ್ 1 (2) ಪೊಲಾರ್ಡ್ 26 (20), ಹೇಡನ್ ವಾಲ್ಷ್ 0 (1) ಬ್ರಾವೊ ಔಟಾಗದೇ 8 (5) ರನ್​ಗಳಿಸಿದರು.
ನಿಗದಿತ 20 ಓವರ್ ಅಂತ್ಯಕ್ಕೆ ವಿಂಡೀಸ್ ತಂಡ 8 ವಿಕೆಟ್​ ಕಳೆದುಕೊಂಡು 143 ರನ್​ ಕಲೆಹಾಕಿದೆ.ದಕ್ಷಿಣ ಆಫ್ರಿಕಾ ಪರ ಡ್ವೇನಿ ಪ್ರಿಟೋರಿಸ್ 3 ಕೇಶವ್ ಮಹರಾಜ್ 2, ಕಗಿಸೋ ರಬಡಾ, ಅನ್ರಿಚ್ ನೊರ್ಟ್ಜ್ ತಲಾ ಒಂದು ವಿಕೆಟ್ ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss