spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

T20 WorldCup: ಮೊದಲ ಪಂದ್ಯದಲ್ಲಿ ಮಂಕಾದ ಆಫ್ರಿಕಾ: ಆಸ್ಟ್ರೇಲಿಯಾಕ್ಕೆ 119 ರನ್ ಟಾರ್ಗೆಟ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ತನ್ನ 9 ವಿಕೆಟ್​ ನಷ್ಟಕ್ಕೆ 118 ರನ್​ ಗಳಿಸಿದೆ.
ಟಂಬಾ ಬವುಮ (12 ರನ್​) ಗಳಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಬೌಲಿಂಗ್ ದಾಳಿಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಶೆ ಮೂಡಿಸಿದರೆ, ಅವರೊಂದಿಗೆ ಕ್ರೀಸ್​ಗೆ ಇಳಿದಿದ್ದ ನಾಯಕ ಕ್ವಿಂಟನ್ ಡಿ ಕಾಕ್ ಕೇವಲ 7 ರನ್​ ಗಳಿಸಿ ಜೋಶ್ ಹ್ಯಾಜಲ್‌ವುಡ್ ಅವರ ಬೌಲಿಂಗ್​ ದಾಳಿಗೆ ಔಟ್​ ಆಗುವ ಮೂಲಕ ಪೆವಿಲಿಯನ್​ಗೆ ತೆರಳಿದರು.
ಬಳಿಕ ಕ್ರೀಸ್​ಗೆ ಇಳಿದ ರಾಸ್ ವ್ಯಾನ್ ಡಸೆನ್ ಕೇವಲ 2 ರನ್​ ಗಳಿಸಿ ಅಲ್ಪ ಮೊತ್ತದ ಕಾಣಿಕೆ ನೀಡಿ ಹೊರ ನಡೆದರು. ಏಡನ್ ಮಾರ್ಕ್ರಮ್ (40) ಅವರ ಜೊತೆಯಾದ ಹೆನ್ರಿಕ್ ಕ್ಲಾಸೆನ್ (13) ಸ್ವಲ್ಪ ಕಾಲ ಕ್ರೀಸ್​ನಲ್ಲಿ ಭರಸವೆಯ ಬ್ಯಾಟಿಂಗ್​ ಮಾಡಿದರು.
10 ಓವರ್‌ಗಳು ಮುಗಿದಾಗ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್​ ಕಳೆದುಕೊಂಡು 59 ರನ್​ ಗಳಿಸಿತ್ತು.ಹೆನ್ರಿಕ್ ಕ್ಲಾಸೆನ್ ಬಳಿಕ ಬ್ಯಾಟಿಂಗ್​ ಮಾಡಲು ಬಂದ ಡೇವಿಡ್ ಮಿಲ್ಲರ್ (16) ಹಾಗೂ ಡ್ವೇನ್ ಪ್ರಿಟೋರಿಯಸ್ (1) ಅಲ್ಪ ಮೊತ್ತದ ಕಾಣಿಕೆ ನೀಡಿ ಪೆವಿಲಿಯನ್ ಸೇರಿದರು.
ಬಳಿಕ ಬಂದ ದಕ್ಷಿಣ ಆಫ್ರಿಕಾ ತಂಡದ ಯಾವುದೇ ಆಟಗಾರರು ಬಹಳ ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.
ಅಂತಿಮವಾಗಿ, 20 ಓವರ್​ಗಳಲ್ಲಿ ಕ್ವಿಂಟನ್ ಡಿ ಕಾಕ್ ಬಳಗ 118 ರನ್​ ಗಳಿಸಲು ಶಕ್ತವಾಯಿತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss