ಕೋವಿಡ್‌ ಎದುರಿಸಲು ಚೀನಾಗೆ ಸಹಾಯ ಹಸ್ತ ಚಾಚಿದ ತೈವಾನ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೋವಿಡ್‌ ತಾಂಡವದಿಂದ ಚೀನಾ ತತ್ತರಿಸಿಹೋಗಿದೆ. ದಿನಕ್ಕೆ 9000ಸಾವಿರಕ್ಕೂ ಅಧಿಕ ಸಾವುಗಳಾಗುತ್ತಿದೆ ಎನ್ನಲಾಗಿದ್ದು ನಿರ್ವಹಣೆ ಮಾಡಲು ಚೀನಾ ಸರ್ಕಾರ ವಿಫಲವಾಗಿದೆ. ಇಂಥಹ ಸಂದರ್ಭದಲ್ಲಿ ಚೀನಾದೊಂದಿಗೆ ನಿರಂತರ ಗಡಿ ಸಂಘರ್ಷದಲ್ಲಿರುವ ತೈವಾನ್‌ ಕೋವಿಡ್‌ ಎದುರಿಸಲು ಚೀನಾಗೆ ಸಹಾಯ ಹಸ್ತ ಚಾಚಿದೆ.

ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಭಾನುವಾರ ಚೀನಾಕ್ಕೆ ಕೋವಿಡ್ ಪ್ರಕರಣಗಳ ಭಾರೀ ಏರಿಕೆಯನ್ನು ನಿಭಾಯಿಸಲು ಸಹಾಯ ಹಾಗು ಅಗತ್ಯವಾದ ನೆರವು ನೀಡುವುದಾಗಿ ಘೋಷಿಸಿದ್ದು ಗಡಿಭಾಗದಲ್ಲಿ ಚೀನಾದ ಮಿಲಿಟರಿ ಚಟುವಟಿಕೆಗಳು ಶಾಂತಿ ಮತ್ತು ಸ್ಥಿರತೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

“ಮಾನವೀಯ ಮೌಲ್ಯದ ಆಧಾರದ ಮೇಲೆ ಅಗತ್ಯವಿರುವವರೆಗೆ, ಹೆಚ್ಚಿನ ಜನರು ಸಾಂಕ್ರಾಮಿಕ ರೋಗದಿಂದ ಹೊರಬರಲು ಮತ್ತು ಆರೋಗ್ಯಕರ ಮತ್ತು ಸುರಕ್ಷಿತ ಹೊಸ ವರ್ಷವನ್ನು ಹೊಂದಲು ಸಹಾಯ ಮಾಡಲು ನಾವು ಅಗತ್ಯ ನೆರವು ನೀಡಲು ಸಿದ್ಧರಿದ್ದೇವೆ” ಎಂದು ತ್ಸೈ ಇಂಗ್-ವೆನ್ ಹೇಳಿದ್ದಾರೆ.
ಡಿಸೆಂಬರ್‌ನಲ್ಲಿ ತನ್ನ ಕಟ್ಟುನಿಟ್ಟಾದ ಶೂನ್ಯ-ಕೋವಿಡ್ ನೀತಿಯನ್ನು ಕೊನೆಗೊಳಿಸಿದ ನಂತರ ಪ್ರಕರಣಗಳ ಸ್ಫೋಟದಿಂದ ಉಂಟಾದ ಕೋವಿಡ್ ಉಲ್ಬಣದಿಂದ ಚೀನಾ ತತ್ತರಿಸುತ್ತಿದೆ. ಚೀನಾ ಶೂನ್ಯ ಕೋವಿಡ್‌ ನೀತಿಯನ್ನು ತೆಗೆದು ಹಾಕಿರುವುದರಿಂದ ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

ಸಮಸ್ಯೆಗಳನ್ನು ಪರಿಹರಿಸಲು ಯುದ್ಧವು ಒಂದು ಆಯ್ಕೆಯಲ್ಲ ಎಂದಿರುವ ತೈವಾನ್‌ ಅಧ್ಯಕ್ಷ ತ್ಸೈ ಮಾತುಕತೆಗೆ ಚೀನಾ ಮುಂದಾಗಬೇಕು ಎಂಬುದನ್ನು ಪುನರುಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!