spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತೈವಾನ್‌ನಲ್ಲಿ ರೈಲು ಅಪಘಾತ: ಮೃತರ ಸಂಖ್ಯೆ 51ಕ್ಕೆ ಏರಿಕೆ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ತೈವಾನ್‌ನ ಪೂರ್ವ ಕರಾವಳಿಯಲ್ಲಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 51ಕ್ಕೇರಿದೆ.
ಟೊರೊಕೊ ಜಾರ್ಜ್ ಪ್ರದೇಶದಲ್ಲಿ ರೈಲು ಸುರಂಗದಿಂದ ಹೊರಬರುವಾಗ, ಲಾರಿಯೊಂದು ಸೇತುವೆ ಮೇಲಿಂದ ರೈಲ್ವೆ ಹಳಿ ಮೇಲೆ ಉರುಳಿತು. ಇದರಿಂದಾಗಿ ರೈಲು ಹಳಿ ತಪ್ಪಿ ಅಪಘಾತಕ್ಕೀಡಾಯಿತು. ರೈಲಿನಲ್ಲಿ 495 ಪ್ರಯಾಣಿಕರಿದ್ದರು.
ಈ ಅಪಘಾತಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಲಾರಿ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಲಾರಿ ರೈಲು ಹಳಿ ಮೇಲೆ ಬಿದ್ದಾಗ, ಅದರೊಳಗೆ ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಲಾರಿ ಮಾಲೀಕನನ್ನು ಪ್ರಶ್ನೆಗೆ ಒಳಪಡಿಸಿದ್ದಾರೆ. ಲಾರಿ ತುರ್ತು ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಸರ್ಕಾರದ ವಿಪತ್ತು ಪರಿಹಾರ ಕೇಂದ್ರ ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss