ಒಂದು ಕೋಟಿ ಟ್ಯಾಕ್ಸ್ ಕಟ್ಟಿ, ಇಲ್ಲಾಂದ್ರೆ ಸೀಜ್ ಮಾಡ್ತೀವಿ: ತಾಜ್‌ಮಹಲ್‌ಗೆ ತೆರಿಗೆ ಇಲಾಖೆ ನೋಟೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರೀತಿಯ ಸಂಕೇತ ಎಂದು ಕರೆಯುವ ತಾಜ್‌ಮಹಲ್‌ಗೆ ಸಂಕಷ್ಟ ಬಂದಿದೆ. ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ತಾಜ್ ಮಹಲ್‌ಗೆ ಮನೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. 1.9 ಕೋಟಿ ನೀರಿನ ತೆರಿಗೆ, ರೂ. 1.5 ಲಕ್ಷ ಆಸ್ತಿ ತೆರಿಗೆ ಬಿಲ್ ಪಾವತಿಸುವಂತೆ ಆಗ್ರಾ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 15ರೊಳಗೆ ಬಾಕಿ ಪಾವತಿಸದಿದ್ದರೆ ತಾಜ್ ಮಹಲ್ ಸೀಜ್‌ ಮಾಡುವುದಾಗಿ ಪುರಸಭೆ ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಪಾಲಿಕೆ ಅಧಿಕಾರಿಗಳು ನೀಡಿದ ಈ ನೋಟಿಸ್ ನೋಡಿ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ತಾಜ್ ಮಹಲ್ ಕಲಾತ್ಮಕ ಹಾಗೂ ಐತಿಹಾಸಿಕ ಕಟ್ಟಡವಾಗಿದ್ದು, ಇದಕ್ಕೆ ಮನೆ ತೆರಿಗೆ ಕಟ್ಟುವುದೇನು ಎಂದು ಅಚ್ಚರಿ ವ್ಯಕ್ತಪಡಿಸಿದರು. ಈ ರೀತಿಯ ನೋಟಿಸ್ ಬರುತ್ತಿರುವುದು ಇದೇ ಮೊದಲು ಅಂತಿದಾರೆ.

ಈ ಕುರಿತು ಎಎಸ್‌ಐ ಸೂಪರಿಂಟೆಂಡೆಂಟ್ ರಾಜ್‌ಕುಮಾರ್ ಪಟೇಲ್ ಮಾತನಾಡಿ, ತಾಜ್ ಮಹಲ್‌ಗೆ ಎರಡು ನೋಟೀಸ್ ಬಂದಿದ್ದು, ಒಂದು ನೀರಿನ ತೆರಿಗೆ ಮತ್ತು ಎರಡು ಆಸ್ತಿ ತೆರಿಗೆ ಬಗ್ಗೆ. ನೋಟಿಸ್ ಗಳಲ್ಲಿ ಒಟ್ಟು 1.9 ಕೋಟಿ ರೂ.ನೀರಿನ ತೆರಿಗೆ ಹಾಗೂ 1.5 ಲಕ್ಷ ಆಸ್ತಿ ತೆರಿಗೆ ಪಾವತಿಸಬೇಕಿದೆ ಎಂದು ತಿಳಿಸಿದ್ದಾರೆ. ಈ ಇಡೀ ಪ್ರಕರಣದಲ್ಲಿ ಕಾರ್ಪೊರೇಷನ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ವಿವರಿಸಿದರು. ರಾಜ್ಯದಲ್ಲಾಗಲೀ, ದೇಶದಲ್ಲಾಗಲೀ ಯಾವುದೇ ಸ್ಮಾರಕಗಳಿಗೆ ತೆರಿಗೆ ಇಲ್ಲ. ಇದು ಅಧಿಕಾರಿಗಳ ತಪ್ಪಿನಿಂದಾಗಿದೆ, ಈ ಸೂಚನೆಗಳ ಬಗ್ಗೆ ಮಾತನಾಡಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!