ಸಿನಿಮಾವನ್ನು ಸಿನಿಮಾವಾಗಿಯೇ ತೆಗೆದುಕೊಳ್ಳಿ: ಜನತೆಗೆ ಶಾರುಖ್ ಖಾನ್ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದೆಲ್ಲಡೆ ಪಠಾಣ್ ಸಿನಿಮಾದ ಕುರಿತು ಹಾಗು ಬೇಷರಮ್ ಹಾಡಿಗೆ ನಾನಾ ರೀತಿಯ ವಿರೋಧವಾಗುತ್ತಿದ್ದು, ಇದರ ನಡುವೆ ನಿನ್ನೆ ಮತ್ತೊಂದು ಹಾಡು ಬಿಡುಗಡೆ ಆಗಿದೆ.ಈ ಹೊತ್ತಿನಲ್ಲಿ ಶಾರುಖ್ ಖಾನ್ , ಒಳ್ಳೆಯ ಮನಸ್ಸಿನಿಂದ ಹಾಡು ನೋಡಿದ್ದೀರಿ. ನಿಮಗೆ ಇಷ್ಟವಾಗಿದೆ. ಹೀಗೆಯೇ ಸಿನಿಮಾವನ್ನೂ ವೀಕ್ಷಿಸಿ ಎಂದು ಹೇಳಿದ್ದಾರೆ. ಈ ಮೂಲಕ ಜನತೆಯಲ್ಲಿ ಸಿನಿಮಾವನ್ನು ಸಿನಿಮಾವಾಗಿಯೇ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಮೂರು ದಿನಗಳ ಹಿಂದೆಯಷ್ಟೇ ಈ ಹಾಡಿನ ಒಂದೇ ಒಂದು ಫೋಟೋವನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಪಠಾಣ್ ಸಿನಿಮಾದ ಎರಡನೇ ಹಾಡು ಇದಾಗಿದ್ದು ‘ಜೂಮೇ ಜೋ ಪಠಾಣ್’ ಹೆಸರಿನ ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!