Sunday, February 28, 2021

Latest Posts

ಜನಜೀವನ ಮಿಷನ್ ಯೋಜನೆ ಸದ್ಭಳಕೆ ಮಾಡಿಕೊಳ್ಳಿ: ಶಾಸಕ ನ್ಯಾಮಗೌಡ

ಹೊಸದಿಗಂತ ವರದಿ,ಬಾಗಲಕೋಟೆ:

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆ-ಮನೆಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಜಾರಿ ಮಾಡಿದೆ ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಜಿಲ್ಲೆಯ ಜಮಖಂಡಿ ತಾಲೂಕಿನ ಲಿಂಗನೂರ ಹಾಗೂ ಜಕನೂರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಹಯೋಗದಲ್ಲಿ ೨೦೨೦-೨೧ನೇ ಸಾಲಿನ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ನಳಿಗಳ ಜೋಡಣೆಯ ಭೂಮಿ ಪೂಜೆಯನ್ನು ನೇರವೆರಿಸಿ ಮಾತನಾಡಿದ ಅವರು ಶೇಕಡಾ ೭೫ರಷ್ಟು ಮತ್ತು ಗ್ರಾಮ ಪಂಚಾಯತಿಯಿಂದ ಶೇಕಡಾ ೧೫ರಷ್ಟು, ಗ್ರಾಮೀಣ ನಿವಾಸಿಗಳು ಶೇಕಡಾ ೧೦ರಷ್ಟು ಹಣವನ್ನು ನೀಡಿ ಕುಡಿಯುವ ನೀರಿನ ನಳಿಗಳ ಜೋಡಣೆಯನ್ನು ಮಾಡಿಸಿಕೊಳ್ಳಬೇಕು ಎಂದರು.
ಜಕನೂರ ಗ್ರಾಮದಲ್ಲಿ ೫೫೦ ಮನೆಗಳು ಅಂದಾಜು ಮೊತ್ತ ೪೮.೮೧ ರೂ,ಅನೂದಾನ ಹಾಗೂ ಲಿಂಗನೂರ ಗ್ರಾಮದಲ್ಲಿ ೪೧೨ ಮನೆಗಳು ಅಂದಾಜು ಮೊತ್ತ ೬೭.೦೧ ಅನೂದಾನದಲ್ಲಿ ನಳಗಳ ಜೋಡಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಗುತ್ತಿಗೆದಾರರಿಗೆ ಖಡಕ ಎಚ್ಚರಿಕೆ :
ಗುತ್ತಿಗೆದಾರರು ಗ್ರಾಮದಲ್ಲಿನ ಜನತೆಗೆ ಅನೂಕಲವಾಗುವಂತೆ ಕೆಲಸ ನಿರ್ವಹಿಸಬೇಕು. ಎರಡು ತಿಂಗಳಿನಲ್ಲಿ ಸಂಪೂರ್ಣವಾಗಿ ಕಾಮಗಾರಿಯನ್ನು ಮುಕ್ತಾಯಗೊಳಿಸಿ. ನಳಗಳ ಜೋಡಣೆಗೆ ತೆಗ್ಗು-ಗುಂಡಿಗಳನ್ನು ಮುಚ್ಚಿಸಿ ರಸ್ತೆಯನ್ನು ಮಾಡಿ ಕೊಡಬೇಕು. ಇಲ್ಲದೆ ಹೋದರೆ ನಿಮ್ಮ ಮೇಲೆ ಸೂಕ್ತವಾಗಿ ಕ್ರಮವನ್ನು ಜರುಗಿಸಲಾಗುತ್ತದೆ ಎಂದು ಖಡಕಕ್ಕಾಗಿ ಎಚ್ಚರಿಕ್ಕೆಯನ್ನು ನೀಡಿದರು..

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!