OIL BATH | ದಿನವೂ ಮಾಡಿ ಎಣ್ಣೆ ಸ್ನಾನ, ಸಾಕಷ್ಟು ಆರೋಗ್ಯ ಬದಲಾವಣೆ ಕಾಣುತ್ತೀರಿ!

ಹಳ್ಳಿ ಬದಿಯಲ್ಲಿ ಹಬ್ಬ ಆಚರಿಸೋಕೆ ಹೋದ್ರೆ ಬೆಳಗ್ಗೆ ಬೆಳಗ್ಗೆ ಮೈತುಂಬಾ ಎಣ್ಣೆ ಹಚ್ಚಿ ಓಡಾಡೋ ಗಂಡಸರು ಕಾಣುತ್ತಾರೆ. ಇನ್ನು ಸಿಟಿಗಳಲ್ಲಿ ಒಮ್ಮೆ ಮಹಡಿ ಮೇಲೆ ಹತ್ತಿ ನೋಡಿದ್ರೆ ಎಣ್ಣೆ ಹಚ್ಚಿ ಬಿಸಿಲು ಕಾಯುವ ಜನ ಕಾಣಿಸ್ತಾರೆ. ಇದನ್ನು ಬಿಟ್ಟರೆ ಇನ್ನು ಎಣ್ಣೆ ಸ್ನಾನ ಸಿಗೋದು ಮಕ್ಕಳಿಗೆ, ಪ್ರತಿದಿನವೂ ಎಣ್ಣೆ ಹಚ್ಚಿ ಬಿಸಿನೀರಿನ ಸ್ನಾನ ಮಾಡಿಸ್ತೇವೆ. ಎಣ್ಣೆ ಸ್ನಾನ ಎಲ್ಲರೂ ಮಾಡಬೇಕು, ಬರೀ ಹಬ್ಬಗಳಲ್ಲಿ ಅಷ್ಟೇ ಅಲ್ಲ, ಆಗಾಗ ಮಾಡುತ್ತಿದ್ದರೆ ಆರೋಗ್ಯಕ್ಕೆ ಸಾಕಷ್ಟು ಲಾಭ ಇದೆ..

  • ಲಿಂಫಾಟಿಕ್ ಸಿಸ್ಟಮ್ ಶುಚಿಗೊಳಿಸುತ್ತದೆ.
  • ಸತ್ತ ಚರ್ಮದ ಲೇಯರ್‌ಗಳನ್ನು ತೆಗೆದುಹಾಕುತ್ತದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ಹಾರ್ಮೋನ್ ಹಾಗೂ ಆಯಿಲ್ ಗ್ಲಾಂಡ್‌ಗಳನ್ನು ಸಮತೋಲನವಾಗಿ ಇರಿಸಿಕೊಳ್ಳುತ್ತದೆ.
  • ರಕ್ತ ಸಂಚಲನ ಹೆಚ್ಚು ಮಾಡಿ, ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ.
  • ಮಸಲ್‌ಗಳನ್ನು ಗಟ್ಟಿ ಮಾಡುತ್ತದೆ.
  • ಪಾಸಿಟಿವ್ ಭಾವನೆ ನೀಡುತ್ತದೆ
  • ಚಳಿಗಾಲದಲ್ಲಿ ಎಣ್ಣೆಯ ಅಂಶವನ್ನು ಹಿಡಿದಿಡುವುದರಿಂದ ಚರ್ಮ ಒಣಗುವುದಿಲ್ಲ.
  • ಸದಾ ಯಂಗ್ ಆದ ತ್ವಚೆ ನಿಮ್ಮದಾಗಲು ದಿನವೂ ಎಣ್ಣೆ ಸ್ನಾನ ಮಾಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!