ಹೊಸದಿಗಂತ ವರದಿ, ಮಂಡ್ಯ:
ಕಾರ್ಖಾನೆ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮೈಶುಗರ್ ಅಧ್ಯಕ್ಷ ಜೆ.ಶಿವಲಿಂಗೇಗೌಡ ಹೇಳಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಅವಿರತ ಶ್ರಮ ಹಾಗೂ ಬಿಜೆಪಿ ಮುಖಂಡರು ಕೂಡ ಕಾರ್ಖಾನೆ ಬಗ್ಗೆ ಹಲವು ಮಾಹಿತಿ ನೀಡುತ್ತಲೇ ಇದ್ದರು. ಅಂತೆಯೇ ಸಂಘಟನೆಗಳು ಹೋರಾಟವನ್ನು ಮಾಡಿದವು. ಈ ಎಲ್ಲದರ ಪರಿಣಾಮ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಅರೆಯುವ ಸಂಬಂಧ ಆಗಬೇಕಿರುವ ಪುನಶ್ಚೇತನ ಹಾಗೂ ಸಿಬ್ಬಂದಿ ಬಗ್ಗೆ ಮಾಹಿತಿ ನೀಡಲಾಗಿದೆ. ನವೆಂಬರ್ನಲ್ಲಿ ತಜ್ಞರು ಸಮಿತಿ ವರದಿ ನೀಡಲಿದೆ ಎಂದರು.
ಮಂಜುನಾಥ್, ಜೋಗಿಗೌಡ, ಸಿ.ಟಿ.ಮಂಜುನಾಥ್, ನವನೀತ್ಗೌಡ, ಹರ್ಷ ಇದ್ದರು.