ಹೊಸದಿಗಂತ ವಿಜಯಪುರ:
ರಾಹುಲ್ ಗಾಂಧಿ ಕುರಿತಾದ ಯತ್ನಾಳ್ ಹೇಳಿಕೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದ್ದು, ನಾವು ಏನು ಕಾನೂನು ಕ್ರಮ ಕೈಗೊಳ್ಳಬೇಕು ಅದನ್ನು ಯತ್ನಾಳ ಮೇಲೆ ಕೈಗೊಳ್ಳುತ್ತೇವೆ ಎಂದು ಎಂ.ಬಿ. ಪಾಟೀಲ ಹೇಳಿದರು.
ರಾಹುಲ್ ಗಾಂಧಿ ಜನ್ಮದ ಬಗ್ಗೆ ಯತ್ನಾಳ್ ವಿವಾದಿತ ಹೇಳಿಕೆ ವಿಚಾರ ಕುರಿತು ಭಾನುವಾರ ನಗರದಲ್ಲಿ ಸುದ್ದಿಗಾರರ ಎದುರು ಪ್ರತಿಕ್ರಿಯಿಸಿ, ಯತ್ನಾಳಗೆ ಬಾಯಿ, ನಾಲಿಗೆ ಮೇಲೆ ಸ್ವಲ್ಪ ಹಿಡಿತವಿರಬೇಕು. ಎಲ್ಲದಕ್ಕೂ ಒಂದು ಮಿತಿಯಿದೆ ಎಂದರು.
ಈ ರೀತಿ ಅಸಭ್ಯ ರೀತಿಯಾಗಿ ತಾಯಿ, ತಂದೆ ಬಗ್ಗೆ, ಯಾರಿಗೆ ಹುಟ್ಟಿದ್ದಾರೆ ಅಂತ ಮಾತಾಡುವುದು ಶೋಭೆ ತರುವಂತಹದ್ದಲ್ಲ. ಯತ್ನಾಳ ಇಲ್ಲಿಗೆ ನಿಲ್ಲಿಸಬೇಕು ಎಂದರು.
ಈ ರೀತಿ ವೈಯಕ್ತಿಕವಾಗಿ ಮಾತನಾಡುವುದು ನಮ್ಮ ಸಂಸ್ಕೃತಿ ಅಲ್ಲ. ವಿಜಯಪುರ ಜಿಲ್ಲೆಯ ಸಂಸ್ಕೃತಿ ಅಲ್ಲ. ಯತ್ನಾಳ ಅವರ ಮನೆತನದ ಸಂಸ್ಕೃತಿಯೂ ಅಲ್ಲ ಎಂದರು.
ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕು ಇಂತವರ ಬಾಯಿ ಮುಚ್ಚಿಕೊಂಡು ಕೂಡ್ರುವ ಹಾಗೆ ಮಾಡಿ
ತುಂಬ ವಿಶೇಷ ವಾದ ಮಾಹಿತಿ