ತಾಲಿ ಸೀರಿಸ್:​ ತೃತೀಯಲಿಂಗಿ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರದಲ್ಲಿ ಬಾಲಿವುಡ್ ತಾರೆ ಸುಶ್ಮಿತಾ ಸೇನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೊಸ ವೆಬ್ ಸರಣಿ ತಾಲಿ ಅಲ್ಲಿ ಬಾಲಿವುಡ್ ತಾರೆ ಸುಶ್ಮಿತಾ ಸೇನ್ ತೃತೀಯ ಲಿಂಗಿ ಕಾರ್ಯಕರ್ತೆ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ರಚನೆಯ ತಾಲಿ ಸೀರಿಸ್​ ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರ ನಿರ್ವಹಿಸಲಿದ್ದಾರೆ.

ಆರ್ಯ ವೆಬ್ ಸರಣಿಯ ನಂತರ ತಾಲಿ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುಶ್ಮಿತಾ ಸೇನ್ ತಮ್ಮ ಫಸ್ಟ್ ಲುಕ್ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಫೋಟೋದಲ್ಲಿ, ಕೆಂಪು – ಹಸಿರು ಸೀರೆ ಧರಿಸಿ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಹಣೆಯ ಮೇಲೆ ದೊಡ್ಡ ಬಿಂದಿ ಹಾಕಿದ್ದು, ಸಖತ್​ ಬೋಲ್ಡ್​ ಲುಕ್ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡು, ತೃತೀಯ ಲಿಂಗಿಗಳ ಹೋರಾಟ, ಕಷ್ಟಗಳನ್ನು ಈ ವೆಬ್​ ಸಿರಿಸ್​ ಹೇಳಲಿದೆ ಎಂದು ತಿಳಿಸಿದ್ದಾರೆ. ಈ ತಾಲಿ ವೆಬ್ ಸೀರಿಸ್ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಅವರ ಜೀವನವನ್ನು ಆಧರಿಸಿದೆ. ಸುಶ್ಮಿತಾ ಅವರು ಗೌರಿ ಪಾತ್ರದಲ್ಲಿ ನಟಿಸುತ್ತಿದ್ದು, ಗೌರಿ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ಎಲ್ಲರಿಗೂ ಸಿಗಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!