ಹೆಣ್ಣುಮಕ್ಕಳ ಪ್ರೌಢ ಶಿಕ್ಷಣ ಕಲಿಕೆಗೆ ಅವಕಾಶ ಕೊಡುತ್ತೇವೆಂದ ತಾಲೀಬಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹೆಣ್ಣು ಮಕ್ಕಳು ಪ್ರೌಢಶಾಲೆಗೆ ಹೋಗಲು ಅವಕಾಶ ನೀಡುತ್ತೇವೆ ಎಂದು ಅಫ್ಘಾನಿಸ್ತಾನದ ಹಂಗಾಮಿ ಆಂತರಿಕ ಆಡಳಿತ ಮಂತ್ರಿ ಮತ್ತು ತಾಲಿಬಾನ್‌ನ ಉಪ ನಾಯಕ ಸಿರಾಜುದ್ದೀನ್ ಹಕ್ಕಾನಿ ಹೇಳಿರುವ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಪಘಾನಿಸ್ಥಾನದ ಮೇಲೆ ಹಿಡಿತ ಸಾಧಿಸಿದ ನಂತರ ಇದೇ ಮೊದಲ ಬಾರಿಗೆ ತಾಲೀಬಾನ್‌ ತನ್ನ ನಿಯಮಗಳಲ್ಲಿ ಸಡಲಿಕೆ ಮಾಡಿ ಹೆಣ್ಣು ಮಕ್ಕಳ ಕಲಿಕೆಗೂ ಅವಕಾಶ ನೀಡಲು ʼಶೀಘ್ರವೇ ಒಳ್ಳೆಯ ಸುದ್ದಿʼ ಕೊಡುವುದಾಗಿ ಹೇಳಿದೆ. ಆದರೆ ʼಆಡಳಿತದ ವಿರುದ್ಧ ಪ್ರತಿಭಟಿಸಿದವರುʼ ಮನೆಯಲ್ಲಿಯೇ ಇರಬೇಕು ಎಂದಿದೆ. ಅಲ್ಲದೇ ಇಸ್ಲಾಮಿಕ್‌ ಆದೇಶದಂತೆ ಹಿಜಬ್‌ ಕಡ್ಡಾಯವಾಗಿ ಧರಿಸಬೇಕು. ಯಾವುದೇ ಕಾರಣಕ್ಕೂ ಮುಖ ಕಾಣಿಸುವಂತಿಲ್ಲ ಎಂದು ತಾಕೀತು ಮಾಡಿದೆ.

ಈ ಹಿಂದೆ ಮಾರ್ಚ್‌ನಲ್ಲಿ 6 ನೇ ತರಗತಿಗಿಂತ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಪ್ರೌಢ ಶಿಕ್ಷಣವನ್ನು ಪುನಃ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಆದರೆ ಷರಿಯಾ ಮತ್ತು ಅಫ್ಘಾನ್ ಪದ್ಧತಿಗಳು ಮತ್ತು ಸಂಸ್ಕೃತಿಯ ಪ್ರಕಾರ ಸೂಕ್ತವಾದ ಸಮವಸ್ತ್ರವನ್ನು ವಿನ್ಯಾಸಗೊಳಿಸುವವರೆಗೆ ಮನೆಯಲ್ಲಿಯೇ ಇರುವಂತೆ ಹೇಳಲಾಗಿತ್ತು ಎಂದು ಅಪ್ಘನ್‌ ಮಾಧ್ಯಮಗಳು ವರದಿ ಮಾಡಿವೆ ಎಂದು ಮೂಲಗಳು ಹೇಳಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!