Saturday, August 13, 2022

Latest Posts

ತೀವ್ರ ಹೋರಾಟದ ಬಳಿಕ ಸೋತ ಪಂಜ್ಶೀರ್ ಈಗ ಸಂಪೂರ್ಣ ತಾಲಿಬಾನ್ ವಶಕ್ಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಡಿಯ ಅಫ್ಘಾನಿಸ್ಥಾನವನ್ನು ತನ್ನ ತೆಕ್ಕೆ ತೆಗೆದುಕೊಳ್ಳುವ ಹಠವನ್ನು ತಾಲಿಬಾನ್ ಪೂರ್ಣಗೊಳಿಸಿಕೊಂಡಿದ್ದು, ನಿರಂತರ ಹೋರಾಟದ ಬಳಿಕ ಪಂಜ್ಶೀರ್ ಈಗ ಸೋತು ತಾಲಿಬಾನ್ ತೆಕ್ಕೆಗೆ ಬಿದ್ದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ತಾಲಿವಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್, ಪಂಜ್ಶೀರ್ ನನ್ನು ತಾಲಿಬಾನ್ ವಶಕ್ಕೆ ಪಡೆದ ಬಳಿಕ ದೇಶವು ಯುದ್ಧದ ಬಿಕ್ಕಟ್ಟಿನಿಂದ ಹೊರಬಂದಿದೆ ಎಂದಿದ್ದಾರೆ.
ಆದರೆ ಈ ಹೇಳಿಕೆಯನ್ನು ಪ್ರತಿರೋಧ ಪಡೆ ವಿರೋಧಿಸಿದ್ದು, ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಶನಿವಾರದಿಂದ ತಾಲಿಬಾನ್ ವಿರುದ್ಧ ನಿರಂತರ ಸಂಗ್ರಾಮದಲ್ಲಿದ್ದ ಪಂಜ್ಶೀರ್, 700ಕ್ಕೂ ಹೆಚ್ಚು ತಾಲಿಬಾನಿಗಳನ್ನು ಹೊಡೆಉರುಳಿಸಿದ್ದು, 1000ಕ್ಕೂ ಹೆಚ್ಚು ಉಗ್ರರರನ್ನು ಬಂಧಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss