ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕೃತವಾಗಿ ಅಧಿಕಾರಕ್ಕೆ ಏರಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಎಲ್ಲವೂ ಎಣಿಕೆಯಂತೆ ಆಗಿದ್ದರೆ ಇಂದು ತಾಲಿಬಾನಿಗಳು ಗದ್ದುಗೆ ಏರಬೇಕಿತ್ತು. ಆದರೆ ಇಂದು ಸರ್ಕಾರ ಉದ್ಘಾಟನೆ ಪ್ಲಾನ್ ಕ್ಯಾನ್ಸಲ್ ಆಗಿದೆ ಎನ್ನಲಾಗಿದೆ.
20 ವರ್ಷಗಳ ಹಿಂದೆ ಇಂದು ಬಿನ್ಲಾಡೆನ್ ಅವಳಿ ಗೋಪುರಗಳ ಮೇಲೆ ಭೀಕರ ದಾಳಿ ನಡೆಸಿದ ದಿನ. ಈ ದಿನವನ್ನು ಸಂಸ್ಮರಿಸುವ ನಿಟ್ಟಿನಲ್ಲಿ ತಾಲಿಬಾನಿಗಳು ಇಂದು ಸರ್ಕಾರ ಉದ್ಘಾಟನೆ ಕಾರ್ಯಕ್ರಮ ನಡೆಸಬೇಕಿತ್ತು. ಆದರೆ ಅದು ಪೋಸ್ಟ್ಪೋನ್ ಆಗಿದೆ ಎನ್ನುವ ವರದಿ ಹೊರಬಿದ್ದಿದೆ.
ತಾಲಿಬಾನ್ ತನ್ನ ಮೈತ್ರಿಗಳ ಒತ್ತಡಕ್ಕೆ ಮಣಿದಿದ್ದು, ಇಂದೇ ಅಧಿಕೃತವಾಗಿ ಅಧಿಕಾರ ಹಿಡಿಯುವ ಪ್ರಯತ್ನ ಕೈ ಬಿಟ್ಟಿದೆ. ಸೆ.11 ರಂದೇ ತಾಲಿಬಾನ್ ಸರ್ಕಾರ ಉದ್ಘಾಟನೆ ಮಾಡುವುದು ಅಮಾನವೀಯ ಎಂದು ತಾಲಿಬಾನ್ ಪರ ಸಹಾನುಭೂತಿಯುಳ್ಳ ಮೈತ್ರಿಗಳು ಅಭಿಪ್ರಾಯಪಟ್ಟಿದ್ದರು. ಅಮೆರಿಕ ಕೂಡ ಇದನ್ನೆ ಬಯಸಿತ್ತು. ತಮ್ಮ ಸಾರ್ವಭೌಮತೆಗೆ ಧಕ್ಕೆ ತಂದ ದಿನ ಸಂಭ್ರಮಿಸುವುದು ಅಸಮಂಜಸ ಎಂದು ಹೇಳಿತ್ತು.
ಅಮೆರಿಕದ ವಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ಖೈದಾ ದಾಳಿ ನಡೆಸಿ ಇಂದಿಗೆ 20 ವರ್ಷವಾಗಿದೆ. ದಾಳಿಯಲ್ಲಿ ಮೂರು ಸಾವಿರ ಜನ ಮೃತಪಟ್ಟಿದ್ದರು.