ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಅಫ್ಘಾನಿಸ್ತಾನ ವಶಪಡೆದ ತಾಲಿಬಾನ್ ಮನರಂಜನೆಯ ವಿರೋಧಿಯಾಗಿದೆ. ಸಿನಿಮಾಗಳ ಮೇಲೆ ನಿಷೇಧ ಹೇರಿರುವ ತಾಲಿಬಾನ್ ಇದೀಗ ಸ್ಟುಡಿಯೋಗಳಿಗೆ ನುಗ್ಗಿ ಸಂಗೀತ ಉಪಕರಣಗಳನ್ನು ಧ್ವಂಸ ಮಾಡಿದೆ.
ಸಂಗೀತಕ್ಕೆ ಸಂಬಂಧಿಸಿದ ಎಲ್ಲ ಇನ್ಸ್ಟ್ರುಮೆಂಟ್ಸ್ಗಳನ್ನು ತಾಲಿಬಾನಿಗಳು ಧ್ವಂಸಗೊಳಿಸಿದ್ದಾರೆ. ಸಂಗೀತ ಪ್ರೇಮಿಗಳು ತಾಲಿಬಾನಿಗಳ ನಡೆಗೆ ಬೇಸತ್ತು ಕಣ್ಣೀರಿಟ್ಟಿದ್ದಾರೆ. ಸಿನಿಮಾಗಳ ಜೊತೆ ಸಂಗೀತವನ್ನೂ ಬ್ಯಾನ್ ಮಾಡಿದ್ದಾರೆ. ಈ ಹಿಂದೆ 1996 ರಲ್ಲಿ ಅಫ್ಘಾನಿಸ್ತಾನದ ಹಿಡಿತ ಸಾಧಿಸಿದ್ದ ತಾಲಿಬಾನ್ ಆಗಲು ಸಂಗೀತ ನಿಷೇಧಿಸಿತ್ತು.