spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಾಲಿಬಾನ್ ಉಗ್ರರಿಗೆ ಸಂಬಳವಿಲ್ಲ, ಸಾಮಾನ್ಯರಿಗೆ ಎದುರಾಗಲಿದೆ ಊಟಕ್ಕೂ ತತ್ವಾರ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಅಲ್ಲಿರುವ ಆಫ್ಘನ್ನರಿಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ.
ನಾಲ್ಕು ಮಿಲಿಯನ್ ಆಫ್ಘನ್ನರು ಆಹಾರ ತುರ್ತುಪರಿಸ್ಥಿತಿ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಈ ಪೈಕಿ ಬಹುತೇಕರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಮುಂಬರುವ ತಿಂಗಳುಗಳಲ್ಲಿ ಚಳಿಗಾಲದ ಗೋಧಿ ನೆಡುವಿಕೆ, ಜಾನುವಾರುಗಳಿಗೆ ಆಹಾರ ಮತ್ತು ದುರ್ಬಲ ಕುಟುಂಬಗಳಿಗೆ ನಗದು ಸಹಾಯ ಮಾಡಲು ಕನಿಷ್ಠ 36 ಮಿಲಿಯನ್ ಡಾಲರ್ ಅವಶ್ಯವಿದೆ.
ತಾಲಿಬಾನಿಗಳು ದೇಶವನ್ನು ವಶಪಡಿಸಿಕೊಂಡಾಗಿನಿಂದಲೂ ಆಫ್ಘನ್‌ನಲ್ಲಿ ಆರ್ಥಿಕ ಕೊರತೆ ಎದುರಾಗಿದೆ.
ಇದೀಗ ಜಾಗತಿಕ ಸಹಾಯಗಳು ಸ್ಥಗಿತಗೊಂಡಿದೆ. ಬ್ಯಾಂಕ್ ಖಾತೆಗಳಿಂದ ಹಿಂಪಡೆಯಲು ದೈನಂದಿನ ಮಿತಿ ನಿಗದಿಪಡಿಸಲಾಗಿದೆ. ಜೊತೆಗೆ ತಾಲಿಬಾನಿ ಉಗ್ರರಿಗೆ ಸಂಬಳ ಕೂಡ ಬರುತ್ತಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ. ತಾಲಿಬಾನಿಗಳನ್ನು ಇಸ್ಲಾಮಿಕ್ ಎಮಿರೇಟ್ ಎಂದು ಗುರುತಿಸಲು ಹೆಚ್ಚಿನ ದೇಶಗಳು ನಿರಾಕರಿಸಿರುವ ಕಾರಣ, ಹಣದ ಕೊರತೆಯಾಗಿದೆ.
ತಾಲಿಬಾನ್ ಸ್ವಾಧೀನದ ನಂತರ ವಿದೇಶಿ ನೆರವು ಸ್ಥಗಿತಗೊಂಡಿದೆ. ಅಂತಾರಾಷ್ಟ್ರೀಯ ನಿಧಿ ಮತ್ತು ವಿಶ್ವ ಬ್ಯಾಂಕ್ ಸಾಲ ಸ್ಥಗಿತಗೊಳಿಸಿದ್ದು ಅಫ್ಘಾನ್‌ಗೆ ದೊಡ್ಡ ಪೆಟ್ಟಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ಕೇಂದ್ರ ಬ್ಯಾಂಕ್‌ಗೆ 9.4 ಬಿಲಿಯನ್ ಡಾಲರ್ ಮೀಸಲುಗಳನ್ನು ನಿಲ್ಲಿಸಲಾಗಿದೆ. ಅಲ್ಲದೇ ಫೈನಾನ್ಶಿಯಲ್ ಹಣಕಾಸು ಕ್ರಿಯಾ ಕಾರ್ಯಪಡೆ ತನ್ನ 39  ಸದಸ್ಯ ರಾಷ್ಟ್ರಗಳನ್ನು ತಾಲಿಬಾನ್ ಆಸ್ತಿ ನಿರ್ಬಂಧಿಸುವಂತೆ ಮನವಿ ಮಾಡಿದೆ.
ಈ ಎಲ್ಲಾ ಕಾರಣಗಳಿಂದ ಆಫ್ಘನ್ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಂಬಳವಿಲ್ಲದೆ ತಾಲಿಬಾನ್ ಉಗ್ರರು ಕೆಲಸ ಮಾಡುತ್ತಿದ್ದಾರೆ. ಇತ್ತ ಅಮಾಯಕ ಆಫ್ಘನ್ನರಿಗೆ ಅನ್ನ ಆಹಾರದ ಕೊರತೆಯಾಗಿದೆ.

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss