spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಂದಿನಿಂದ ಅಫ್ಘಾನಿಸ್ತಾನದಲ್ಲಿ ಬಾಲಕರ ಶಾಲೆ ಆರಂಭ: ತಾಲಿಬಾನ್ ಶಿಕ್ಷಣ ಸಚಿವಾಲಯ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಾಲಿಬಾನ್ ಆಡಳಿತದಲ್ಲಿರುವ ಅಫ್ಘಾನಿಸ್ತಾನದಲ್ಲಿ ಇಂದಿನಿಂದ ಬಾಲಕರ ಶಾಲೆ ಪ್ರಾರಂಭವಾಗಲಿದೆ ಎಂದು ತಾಲಿಬಾನ್ ಶಿಕ್ಷಣ ಸಚಿವಾಲಯ ತಿಳಿಸಿದೆ.
ಕಳೆದ ಒಂದು ತಿಂಗಳಿನಿಂದ ಆರ್ಥಿಕವಾಗಿ ಕುಗ್ಗಿದ್ದ ತಾಲಿಬಾನ್ ಜನರ ಜೀವನವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ.  ಸದ್ಯ ಆರನೇ ತರಗತಿಯವರೆಗೆ ಹುಡುಗಿಯರು ಶಾಲೆಗೆ ಹಾಜರಾಗುತ್ತಿದ್ದು, ಬಾಲಕಿಯರ ಪ್ರೌಢ ಶಾಲೆ ತೆರೆಯುವ ಬಗ್ಗೆ ತಾಲಿಬಾನ್ ಯಾವುದೇ ಮಾಹಿತಿ ನೀಡಿಲ್ಲ.
ಪ್ರಾಥಮಿಕ ಮತ್ತು ಮಾಧ್ಯಮಿಕ ಮಟ್ಟದಲ್ಲಿ ರಾಜ್ಯ ಮತ್ತು ಖಾಸಗಿ ಶಾಲೆಗಳು ಮತ್ತು ಅಧಿಕೃತ ಮದರಸಾ ಧಾರ್ಮಿಕ ಶಾಲೆಗಳು ಶನಿವಾರದಿಂದ ತೆರೆಯುತ್ತವೆ ಎಂದು ತಾಲಿಬಾನ್ ತಿಳಿಸಿದೆ.
ಈ ಹಿಂದೆ ಹೊಸ ನಿಯಮಗಳನ್ನು ಜಾರಿಗೆ ತಂದ ತಾಲಿಬಾನ್, ಅಫ್ಘಾನಿಸ್ತಾನದಲ್ಲಿನ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಬಾಲಕ- ಬಾಲಕಿಯರಿಗೆ ಪ್ರತ್ಯೇಕ ಶಿಕ್ಷಣ ನೀಡಬೇಕು ಹಾಗೂ ಮಹಿಳೆಯರಿಗೆ ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶವಿಲ್ಲ ಎಂದು ಘೋಷಿಸಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss