ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದಿಂದ ಅಲ್ಲಿನ ಮಹಿಳೆಯರು ಪ್ರಾಣ ಭೀತಿ ಎದುರಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡುವುದಾಗಿ ತಾಲಿಬಾನ್ ಸಂಘಟನೆ ಭರವಸೆ ನೀಡಿತ್ತು. ಆದರೆ, ಉಗ್ರರ ಆಡಳಿತದಿಂದ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ನರಕ ದರ್ಶನವಾಗುತ್ತಿದೆ.
ಅಫ್ಘಾನಿಸ್ತಾನದ 12ರಿಂದ 45 ವರ್ಷದೊಳಗಿನ ಮಹಿಳೆಯರನ್ನು ಮದುವೆಯಾಗಿ, ಲೈಂಗಿಕ ದಾಸಿಯರನ್ನಾಗಿ ಮಾಡಿಕೊಳ್ಳುತ್ತಿರುವ ತಾಲಿಬಾನ್ ಉಗ್ರರು, ಮಹಿಳೆಯರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರಿದ್ದಾರೆ. ಮಹಿಳಾ ಪರ್ತಕರ್ತೆಯರು, ಆಯಂಕರ್ಗಳನ್ನು ವಾಪಾಸ್ ಮನೆಗೆ ಕಳುಹಿಸಲಾಗಿದ್ದು, ಮಹಿಳೆಯರು ಜೀನ್ಸ್ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ.
ಇದೀಗ ಅಫ್ಘಾನಿಸ್ತಾನದಲ್ಲಿರುವ ಮಹಿಳೆಯರು ಉಗುರಿಗೆ ನೇಲ್ ಪಾಲಿಶ್ ಹಚ್ಚಿಕೊಂಡರೆ ಅವರ ಕೈ ಬೆರಳನ್ನೇ ಕಟ್ ಮಾಡುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದೆ. ಮಹಿಳೆಯರು ಜೀನ್ಸ್ ಧರಿಸುವಂತಿಲ್ಲ, ಮೈ ತುಂಬ ಬುರ್ಖಾ ಧರಿಸದೆ ಹೊರಗೆ ಓಡಾಡುವಂತಿಲ್ಲ. ಒಂದುವೇಳೆ ಈ ನಿಯಮಗಳನ್ನು ಮೀರಿದರೆ ಆ ಮಹಿಳೆಯರಿಗೆ ಕಠಿಣ ಶಿಕ್ಷೆ ನೀಡಲಾಗುವುದು.
ಇತ್ತೀಚೆಗೆ ಜೀನ್ಸ್ ಧರಿಸಿದ ಮಹಿಳೆಯರಿಗೆ ತಾಲಿಬಾನ್ ಉಗ್ರರು ಥಳಿಸಿದ ಘಟನೆಯೂ ನಡೆದಿತ್ತು. ಜೀನ್ಸ್ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದ್ದು, ಅದನ್ನು ಧರಿಸುವಂತಿಲ್ಲ ಎಂದು ಬಂದೂಕು ತೋರಿಸಿ, ಬೆದರಿಕೆಯೊಡ್ಡಿದ್ದರು.
ಕಂದಹಾರ್ನಲ್ಲಿ ಮಹಿಳೆಯರು ಹಾಗೂ ಯುವತಿಯರಿಗೆ ಫತ್ವಾ ಹೊರಡಿಸಲಾಗಿದ್ದು, ನೇಲ್ ಪಾಲಿಶ್ ಹಚ್ಚಿಕೊಂಡರೆ ಬೆರಳನ್ನೇ ಕತ್ತರಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಹಾಗೇ, ಮಹಿಳೆಯರು ಹೈ ಹೀಲ್ಡ್ ಚಪ್ಪಲಿಗಳನ್ನು ಕೂಡ ಧರಿಸುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಗಳಿಂದ ಅಫ್ಘಾನ್ ಮಹಿಳೆಯರ ಪರಿಸ್ಥಿತಿ ಶೋಚನೀಯವಾಗಿದೆ.