Monday, July 4, 2022

Latest Posts

ಆರ್ ಎಸ್ ಎಸ್ ಸಂಘಟನೆ ಕುರಿತು ಮಾತನಾಡಿದರೆ ಸಹಿಸಲ್ಲ: ಸಚಿವ ಕಾರಜೋಳ ಖಡಕ್ ಎಚ್ಚರಿಕೆ

ಹೊಸ ದಿಗಂತ ವರದಿ,ಬಾಗಲಕೋಟೆ:

ಆರ್ ಎಸ್ ಎಸ್ ಮುಂಖಡರು ದೇಶಕ್ಕಾಗಿ ತಮ್ಮ ಸರ್ವ ಸ್ವವನ್ನೂ ತ್ಯಾಗ ಮಾಡಿ, ತಮ್ಮ ಪೂರ್ವಾಶ್ರಮವನ್ನು ತೊರೆದು ಬಂದು ಕೇಶವ ಕೃಪಾದಲ್ಲಿ, ಜೀವನ ನಡೆಸುತ್ತಾರೆ ಅಂತಹ ಸಂಘಟನೆ ವಿರೋಧ ಮಾತನಾಡುವದನ್ನು ಸಹಿಸಲಾಗದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ನವರು ಬಿಜೆಪಿ ಪಕ್ಷದ ಜತೆಗೆ ಚುನಾವಣೆ ಎದುರಿಸಬೇಕೆ ವಿನಃ ಆರ್ ಎಸ್ ಎಸ್ ಸಂಘಟನೆಗೆ ಜತೆ ಅಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ದೇಶ ಭಕ್ತಿಯ ಪ್ರತೀಕ ವಾಗಿರುವ ಆರ್ ಎಸ್ ಎಸ್ ಸಂಘಟನೆಯಲ್ಲಿ ಜಾತಿ ಧರ್ಮ ಯಾವುದಿಲ್ಲ. ಕೇಶವ ಕೃಪಾದಲ್ಲಿ ಯಾವ ಯಾವ ಜಾತಿಯರು ಇದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ವಿನಾಕಾರಣ ನಮ್ಮ ರಾಷ್ಟ್ರೀಯ ಸ್ವಯಂ ಸೇವಕರ ಸಂಸ್ಥೆಯನ್ನು ಅನಗತ್ಯವಾಗಿ ರಾಜಕಾರಣಕ್ಕೆ ಎಳೆದು ತರಬೇಡಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು.
ಆರ್ಎಸ್ಎಸ್ ಯಾವುದೇ ಒಂದು ಪಕ್ಷಕ್ಕೆ ಸಿಮೀತವಾಗಿಲ್ಲ. ಭಾರತೀಯ ಸಂಸ್ಕೃತಿ ಉಳಿಸಬೇಕು, ಬೆಳಸಬೇಕು. ಧರ್ಮವನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶ ಹೊಂದಿರುವ ಸಂಸ್ಥೆಯಾಗಿದ್ದು ಕುಮಾರಸ್ವಾಮಿ ಅವರು ವಿನಾಕಾರಣ ಈ ಕುರಿತ ಚರ್ಚೆಗೆ ಬರುವುದು ಬೇಡಾ ಎಂದು ತಿಳಿಸಿದರು.
ಗೌಡರು ಅಧಿಕಾರದಲ್ಲಿದ್ದರೇ ಕಾಶ್ಮೀರ ಪಾಕಿಸ್ತಾನಕ್ಕೆ ಹೋಗ್ತಿತ್ತು: ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರು ಇನ್ನಷ್ಟು ದಿನ ಪ್ರಧಾನಿ ಅಧಿಕಾರದಲ್ಲಿ ಇದಿದ್ದರೆ ಕಾಶ್ಮೀರ ಪಾಕಿಸ್ತಾನ ಪಾಲಾಗುತ್ತಿತ್ತು. ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದು ಬೇಡ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿವರಿಗೆ ಈ ದೇಶ ಅಖಂಡ ಭಾರತ ಒಂದು ಎಂದು ಉಳಿಸುವ ಸಲುವಾಗಿ ನರೇಂದ್ರ ಮೋದಿ ಅವರ ಸಕರ್ಾರ ವಿಶೇಷ ಸ್ಥಾನ ಮಾನ 370 ಕಲಂ ರದ್ದು ಮಾಡಿ, ಅಲ್ಲಿ ಇರುವವರೆಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಅಲ್ಲಿನ ದೀನ ದಲಿತರಿಗೆ, ಅಸ್ಪೃಶ್ಯರಿಗೆ ಮೀಸಲಾತಿ ವ್ಯವಸ್ಥೆ ಇರಲಿಲ್ಲ. ಇವತ್ತು ಮೀಸಲಾತಿ ಜಾರಿಗೆ ಬಂದಿದೆ ಎಂದರು.
ಭಾರತದ ಇತರ ರಾಜ್ಯಗಳಲ್ಲಿ ಇರುವಂತಹ ಪ್ರಜೆಗಳಿಗೆ ಏನು ಸ್ಥಾನಮಾನ ಇದೆ. ಆ ಎಲ್ಲ ಸ್ಥಾನಮಾನ ಕೊಡುವಂತಹ ಕೆಲಸವನ್ನು ನರೇಂದ್ರ ಮೋದಿ ಅವರ ಸ ಮಾಡಿದೆ. ಅದನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ವಿನಾಕಾರಣ ಟೀಕೆ ಟಿಪ್ಪಣಿ ಮಾಡಬಾರದು ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರ ಹೇಳಿಕೆಗೆ ಸಚಿವ ಕಾರಜೋಳ ತಿರುಗೇಟು ನೀಡಿದರು.
ಕೊಪ್ಪಳ ಜಿಲ್ಲೆಯ ಏತ ನೀರಾವರಿಗೆ ಎರಡು ತಿಂಗಳಲ್ಲಿ ಚಾಲನೆ: ಕೊಪ್ಪಳ ಜಿಲ್ಲೆಯ ಏತ ನೀರಾವರಿ ಮಾಡುವ ಬಗ್ಗೆ ಎರಡು ತಿಂಗಳನಲ್ಲಿ ಪ್ರಾಯೋಗಿಕವಾಗಿವಾಗಿ ಚಾಲನೆ ನೀಡಿಲಾಗುವುದು. ಜಿಲ್ಲೆ0ು ಹುನಗುಂದ ತಾಲೂಕ ಸೇರಿದಂತೆ ಕೊಪ್ಪಳ ಜಿಲ್ಲೆ0ು ಕೆಲವು ತಾಲೂಕಿನಲ್ಲಿ ಯೋಜನೆ ಸದುಪಯೋಗಆಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಹಾಲಪ್ಪ ಆಚಾರ್ಯ, ಸಂಸದ ಪಿ.ಸಿ. ಗದ್ದಿಗೌಡರ ಸುದ್ದಿಗೋಷ್ಠಿಯಲ್ಲಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss