ದಕ್ಷಿಣ ಭಾರತದ ಅಭಿಮಾನಿಗಳನ್ನು ಗ್ರೇಟ್ ಎಂದ ಮಿಲ್ಕಿ ಬ್ಯೂಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಟಾರ್‌ ನಟ, ಉದಯೋನ್ಮುಖ ನಟ ಎಂಬ ಭೇದ-ಬಾವ ಮಾಡದೆ ಎಲ್ಲ ಹೀರೋಗಳ ಜೊತೆ ಸಿನಿಮಾ ಮಾಡುವ ಟಾಪ್ ಹೀರೋಯಿನ್ ತಮನ್ನಾ. ಸದ್ಯ ತಮನ್ನಾ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಕೆಲವು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲೊ ಮಾತನಾಡಿದ ಮಿಲ್ಕಿ ಬ್ಯೂಟಿ, ಸೌತ್ ಫ್ಯಾನ್ಸ್ ಮತ್ತು ನಾರ್ತ್ ಫ್ಯಾನ್ಸ್ ನಡುವಿನ ವ್ಯತ್ಯಾಸವನ್ನು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇತ್ತೀಚೆಗಷ್ಟೇ ತಮನ್ನಾ ವೆಂಕಟೇಶ್ ಅಭಿನಯದ ಎಫ್3 ಬಿಡುಗಡೆಯಾಗಿದೆ. ಮೆಗಾಸ್ಟಾರ್ ಜೊತೆಗೆ ಭೋಲಾಶಂಕರ್, ದಟ್ ಈಸ್ ಮಹಾಲಕ್ಷ್ಮಿ, ತಮಿಳಿನಲ್ಲಿ ಎನ್ ಎಂಡ್ರು ಎಂಬೆನ್,  ಕುತ್ತು ಕುರುಪ್,  ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ, ಅಮರ್ ಕೌಶಿಕ್ ಜೊತೆಗಿನ ಭೋಲೆ ಚುಡಿಯನ್, ಚೋರ್ ನಿಖಿಲ್ ಕಿ ಬಾಗೇ ಮತ್ತು ಮಧುರ್ ಬಂಡಾರ್ಕರ್ ಅವರ ಬಬ್ಲಿ ಬೌನ್ಸರ್ ಚಲನಚಿತ್ರಗಳು ತಮನ್ನಾ ಮುಂಬರುವ ಚಲನಚಿತ್ರಗಳ ಪಟ್ಟಿಯಲ್ಲಿವೆ.

ಸಂದರ್ಶವೊಂದರಲ್ಲಿ ಮಾತನಾಡಿದ ತಮನ್ನಾ, ”ದಕ್ಷಿಣ ಭಾರತದ ಅಭಿಮಾನಿಗಳು ಕಲಾವಿದರ ಭಾವನೆಗಳನ್ನು  ಅರ್ಥಮಾಡಿಕೊಳ್ಳುತ್ತಾರೆ. ಅವರಿಗೆ ಅಪಾರವಾದ ಗೌರವ ಕೊಡುತ್ತಾರೆ. ಸ್ಟಾರ್‌ ಮತ್ತು ಅಭಿಮಾನಿಗಳ ನಡುವಿನ ಆರೋಗ್ಯಕರ ಸಂಬಂಧ ದಕ್ಷಿಣ ಭಾರತದಲ್ಲಿದೆ. ಆದರೆ ಉತ್ತರದ ಅಭಿಮಾನಿಗಳು ಅಷ್ಟು ಆಪ್ತತೆಯನ್ನು ಹೊಂದುವುದಿಲ್ಲ ಜೊತೆಗೆ ಸ್ಟಾರ್‌ಗಳನ್ನು ಟ್ರೋಲ್ ಮಾಡುವಲ್ಲಿ ಉತ್ತರದ ಅಭಿಮಾನಿಗಳು ಮುಂಚೂಣಿಯಲ್ಲಿರುತ್ತಾರೆ ಎಂದಿದ್ದಾರೆ. ತಮನ್ನಾ ಮಾತುಗಳು ಇದೀಗ ಎಲ್ಲೆಡೆ ವೈರಲ್‌ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!