ತರಕಾರಿ ಇಲ್ಲದಿದ್ದರೆ, ದಿಢೀರ್‌ ಅಂತ ಹುಣಸೆಹಣ್ಣಿನ ಸಾಂಬಾರ್‌ ಮಾಡಿ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು:

ಹುಣಸೆಹಣ್ಣು – 50ಗ್ರಾಂ
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ – ಟೀಚಮಚ
ಹಸಿಮೆಣಸಿನಕಾಯಿ – 2
ಈರುಳ್ಳಿ, ಬೆಳ್ಳುಳ್ಳಿ – ಒಂದು
ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಸಾಕಷ್ಟು.

ತಯಾರಿಸುವ ವಿಧಾನ:

ಎರಡು ಲೋಟ ನೀರಿಗೆ ಹುಣಸೆ ಹಣ್ಣನ್ನು ಹಾಕಿ ಚೆನ್ನಾಗಿ ರಸ ತೆಗೆಯಿರಿ. ಈಗ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಅರಿಶಿನ, ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಚೆನ್ನಾಗಿ ಕುದಿ ಬಂದ ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಸ್ಟವ್ ಆಫ್ ಮಾಡಿ.

ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಸಾಸಿವೆ, ಕರಿಬೇವು, ಒಣಮೆಣಸು ಈರುಳ್ಳಿ ಚೂರುಗಳು ಮತ್ತು ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಒಗ್ಗರಣೆ ಮಾಡಿ ಆ ರಸಕ್ಕೆ ಹಾಕಿ ಪ್ಲೇಟ್‌ ಮುಚ್ಚಿಬಿಡಿ. ಬಹಳ ಬೇಗ ಹಾಗೆಯೇ ತುಂಬಾ ಸರಳವಾಗಿ ಮತ್ತು ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ಹುಣಸೆ ಹಣ್ಣಿನ ಸಾಂಬಾರ್‌ ಸಿದ್ಧವಾದಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!