ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಮಿಳಿನ ನಟ ಸಿದ್ಧಾರ್ಥ್ ಸಾವನ್ನಪಿದ್ದಾರೆಯೇ?: ಯೂಟ್ಯೂಬ್ ವಿಡಿಯೋ ನೋಡಿ ಶಾಕ್ ಆದ ಹೀರೋ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಮಿಳಿನ ನಟ ಸಿದ್ಧಾರ್ಥ್ ಸಾವನ್ನಪಿದ್ದಾರೆಯೇ ? ಇದೀಗ ಯೂಟ್ಯೂಬ್ ವಿಡಿಯೋವೊಂದು ಹರಿದಾಡುತ್ತಿದ್ದು, ಇದನ್ನು ನೋಡಿ ಅಭಿಮಾನಿಗಳೇ ಈ ರೀತಿ ಪ್ರಶ್ನೆ ಮಾಡುತ್ತಿದ್ದಾರೆ.
ಹೌದು, ಯೂಟ್ಯೂಬ್ ವಿಡಿಯೋoದರಲ್ಲಿ ಮಧ್ಯ ವಯಸ್ಸಿನಲ್ಲಿ ಸಾವನ್ನಪ್ಪಿದ ನಟ ನಟಿಯರ ಸಾಲಿನಲ್ಲಿ ಸಿದ್ಧಾರ್ಥ್​ನನ್ನು ಸೇರಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಯುವಕರಾಗಿದ್ದಲೇ ಸಾವನ್ನಪ್ಪಿದ 10 ನಟ ನಟಿಯರು ಎನ್ನುವ ಶೀರ್ಷಿಕೆ ಇರುವ ವಿಡಿಯೋ ಒಂದರಲ್ಲಿ ಸಿದ್ಧಾರ್ಥ್ ಹೆಸಾರಿದ್ದು, ಸಿದ್ಧಾರ್ಥ್ ಜತೆ ನಟಿಯರಾದ ಸೌಂದರ್ಯ ಮತ್ತು ಆರತಿ ಅಗರ್ವಾಲ್ ಇರುವ ಫೋಟೋವಬನ್ನು ವಿಡಿಯೋದ ಫೀಚರ್ಡ್ ಇಮೇಜ್ ಮಾಡಲಾಗಿದೆ.
ವಿಡಿಯೋದ ಒಳಗೆ ಸಿದ್ಧಾರ್ಥ್ ಬಗ್ಗೆ ಮಾಹಿತಿಯಿಲ್ಲ ಆದರೂ ಅದರ ಇಮೇಜ್​ನಲ್ಲಿ ಅವರ ಫೋಟೋ ಬಳಸಲಾಗಿದೆ. ಅಂದ ಹಾಗೆ ಈ ವಿಡಿಯೋ ಪೋಸ್ಟ್ ಆಗಿ ಬರೋಬ್ಬರಿ 3 ವರ್ಷ ಆಗಿದೆ.
ಈ ವಿಡಿಯೋದ ತುಣುಕನ್ನು ಅಭಿಮಾನಿಯೊಬ್ಬರು ಸಿದ್ಧಾರ್ಥ್​ಗೆ ಕಳಿಸಿದ್ದರಂತೆ. ಅದನ್ನು ಕಂಡು ಗಾಬರಿಗೊಂಡ ಸಿದ್ಧಾರ್ಥ್ ಯೂಟ್ಯೂಬ್​ಗೆ ವಿಡಿಯೋ ಬಗ್ಗೆ ರಿಪೋರ್ಟ್ ಮಾಡಿದ್ದಾರೆ. ಆದರೆ ಯೂಟ್ಯೂಬ್, ಈ ವಿಡಿಯೋದಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಸಿದ್ಧಾರ್ಥ್​ಗೆ ರಿಪ್ಲೇ ಮಾಡಿದೆಯಂತೆ. ಈ ವಿಚಾರವನ್ನು ಸ್ವತಃ ಸಿದ್ಧಾರ್ಥ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss