ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ವಿಶಾಲ್ ಆರೋಗ್ಯ ಏರುಪೇರಾಗಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ತಮ್ಮ ಮದಗಜರಾಜ ಚಿತ್ರದ ಪ್ರೋಮೋಷನ್ ನಲ್ಲಿ ಪಾಲ್ಗೊಂಡಿದ್ದ ನಟ ತೀವ್ರ ಅಸ್ವಸ್ಥತೆಗೀಡಾಗಿದ್ದರು. ಈ ವೇಳೆ ನಡುಗುವ ಕೈ, ತೊದಲು ಮಾತಿನ ವಿಶಾಲ್ ವಿಡಿಯೋ ವೈರಲ್ ಆದ ಬಳಿಕ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಇದೀಗ ವಿಶಾಲ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ವಿಶಾಲ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಇಷ್ಟಾದರೂ ವಿಶಾಲ್ ಅವರು ತಮ್ಮ ಕನಸಿನ ಮಧ ಗಜ ರಾಜ ಸಿನಿಮಾಗಾಗಿ ಹೊರ ಬಂದಿದ್ದರು. ಸದ್ಯದ ಮಾಹಿತಿ ಪ್ರಕಾರ ನಟ ವಿಶಾಲ್ ಅವರು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯರ ಮಾಹಿತಿ ಪ್ರಕಾರ ವಿಶಾಲ್ ಅವರಿಗೆ ವೈರಲ್ ಇನ್ಫೆಕ್ಷನ್‌ನಿಂದ ತುಂಬಾ ಜ್ವರ ಇದೆ. ಮತ್ತೊಬ್ಬರ ಸಹಾಯದಿಂದ ವಿಶಾಲ್ ಅವರು ನಡೆದಾಡುವ ಸ್ಥಿತಿ ಎದುರಾಗಿದೆ. ವಿಶಾಲ್ ಅವರ ತಂಡದ ಸದಸ್ಯರು ಅವರ ಆರೈಕೆಯಲ್ಲಿ ನಿರತರಾಗಿದ್ದಾರೆ.