- ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಚಿತ್ರರಂಗದಲ್ಲೂ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಪಾಂಡು ಕೊರೋನಾಕ್ಕೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕು ತಗುಲಿದ್ದರಿಂದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ನಿಧನರಾಗಿದ್ದಾರೆ.
1970ರಲ್ಲಿ ತಮಿಳಿನಲ್ಲಿ ಜೈಶಂಕರ್-ಮುತ್ತುರಮನ್ ನಟನೆಯ ಮಾನವನ್ ಚಿತ್ರದ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಪಾಂಡು ಅವರು ಗಿಲ್ಲಿ, ಕಾದಲ್ ಕೊಟ್ಟೈ, ಪೊಕ್ಕಿರಿ, ಎಜೈಯಿನ್ ಸಿರಿಪಿಲ್ ಚಿತ್ರಗಳ ಮೂಲಕ ಖ್ಯಾತರಾಗಿದ್ದರು. ಇಂದ ನಿಲೈ ಮಾರುಮ್ ಪಾಂಡು ಅವರು ನಟಿಸಿದ್ದ ಕೊನೆಯ ಚಿತ್ರವಾಗಿದೆ.
ವಿಶೇಷವೆಂದರೆ, ಪಾಂಡು ಮೂರು ತಲೆಮಾರಿನ ಕಲಾವಿದರ ಜೊತೆಗೆ ಕೆಲಸ ಮಾಡಿದ್ದಾರೆ. 70ರ ದಶಕದ ಸ್ಟಾರ್ ನಟರಾದ ಎಂಜಿಆರ್, ಶಿವಾಜಿ ಗಣೇಶನ್, ನಂತರ ಬಂದ ಕಮಲ್ ಹಾಸನ್, ರಜನಿಕಾಂತ್, ಈಗಿನ ‘ದಳಪತಿ’ ವಿಜಯ್, ಅಜಿತ್ ಅವರ ಸಿನಿಮಾಗಳಲ್ಲಿಯೂ ಪಾಂಡು ಬಣ್ಣ ಹಚ್ಚಿದ್ದಾರೆ.