Wednesday, August 17, 2022

Latest Posts

ತಮಿಳು ಚಿತ್ರ ನಿರ್ದೇಶಕ ಎಸ್. ಪಿ. ಜನನಾಥನ್ ಇನ್ನಿಲ್ಲ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಾಷ್ಟ್ರೀಯ ಪ್ರಶಸ್ತಿ ವಿಜೇತ, ತಮಿಳು ನಿರ್ದೇಶಕ ಎಸ್. ಪಿ. ಜನನಾಥನ್ (61) ಇಂದು ಬೆಳಗ್ಗೆ ಹೃದಯಾಘಾತದಿಮದ ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಜನನಾಥನ್  ಅವರು ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಇದನ್ನು ಗಮನಿಸಿದ ಸಹಾಯಕ ನಿರ್ದೇಶಕರೊಬ್ಬರು ಚೆನ್ನೈನ ಅಪೊಲೊ ಆಸ್ಪತ್ರೆ ದಾಖಲಿಸಿದ್ದರು. ಆದರೆ ವೈದ್ಯರು ಅವರ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಿದ್ದರು. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.

ಜನನಾಥನ್ ಅವರು ಮುಂಬರುವ ಚಿತ್ರ ಲಾಬಾಮ್ ನ ಎಡಿಟಿಂಗ್ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು, ಇದರಲ್ಲಿ ವಿಜಯ್ ಸೇತುಪತಿ ಮತ್ತು ಶ್ರುತಿ ಹಾಸನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಐಯಾರ್ಕೈ, ಇ, ಪೆರಾನ್ಮೈ ಮತ್ತು ಪುರಂಪೋಕ್ಕು ಏಂಗಿರ ಪೊದುವುದಮೈ ಜನನಾಥನ್ ಅವರು ನಿರ್ದೇಶಿಸಿದ ಚಿತ್ರಗಳು.

ಜಗನ್ನಾಥನ್ 2003ರಲ್ಲಿ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದ್ದು, ಆಗ ತೆರೆ ಕಂಡಿದ್ದ ಐಯಾರ್ಕೈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!