ಮಹಾ ಕೋಪಿಷ್ಟ ರೋಬೋ: ಕ್ಷಮೆ ಕೇಳುವವರೆಗೂ ಬಿಡೋದಿಲ್ಲವಂತೆ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಲ್ಲಿಯವರೆಗೆ ಚಿಟ್ಟಿ ಎಂಬ ರೋಬೋಟ್ ಅನ್ನು ನಾವೆಲ್ಲರೂ ಸಿನಿಮಾದಲ್ಲಿ ನೋಡಿದ್ದೇವೆ, ನಿಜ ಜೀವನದಲ್ಲಿಯೂ ಹೊಟೇಲ್‌ಗಳಲ್ಲಿ ಊಟ ಸರ್ವ್‌ ಮಾಡುವ ರೋಬೋಗಳನ್ನೂ ಸಹ ನೋಡಿದ್ದೇವೆ. ಚೆನ್ನಾಗಿ ಕೆಲಸ ಮಾಡುವ ರೋಬೋಟ್ ಅನ್ನು ನಾವು ನೋಡಿದ್ದೇವೆ. ಮತ್ತು ಅದೇ ರೋಬೋಟ್‌ಗೆ ಭಾವನೆಗಳಿದ್ದರೆ? ಚೆನ್ನೈನ ವಿದ್ಯಾರ್ಥಿಯೊಬ್ಬ ಇಂತಹ ಯಂತ್ರವನ್ನು ತಯಾರಿಸಿದ್ದಾನೆ.

ರೋಬೋಟ್ ಏನು ಮಾಡಲು ಸಾಧ್ಯ ನಾವು ಹೇಳುವ ಕೆಲಸಗಳನ್ನು ಮಾಡುತ್ತೆ. ಆದರೆ ಈ ರೋಬೋಟ್ ವಿಶೇಷತೆ ಏನು ಗೊತ್ತಾ.. ಭಾವನೆಗಳು… ಹೌದು, ಇದು ಮಾನವನ ಭಾವನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ. ಇನ್ನೊಬ್ಬ ವ್ಯಕ್ತಿ ದುಃಖಿತನಾಗಿದ್ದರೆ ಈ ರೋಬೋಟ್ ಗ್ರಹಿಸಬಲ್ಲದು. ಅಷ್ಟೇ ಅಲ್ಲ, ಯಾರಾದ್ರೂ ಗದರಿದರೆ ಸುಮ್ಮನಿರುವುದಿಲ್ಲ. ಕ್ಷಮೆ ಹೇಳುವ ತನಕ ಬಿಡುವುದಿಲ್ಲವಂತೆ. ನೀವು ಮತ್ತೆ ಮಾತನಾಡಿಸಿದರೆ, ನಿಮ್ಮೊಂದಿಗೆ ಮಾತನಾಡುವುದಿಲ್ಲ ಎಂದು ಮುಖಕ್ಕೆ ಹೊಡೆದಾಗಿ ಹೇಳುತ್ತಂತೆ.

ಈ ರೋಬೋಟ್‌ನ್ನು 13 ವರ್ಷದ ಪ್ರತೀಕ್ ಎಂಬ ಬಾಲಕ ತಯಾರಿಸಿದ್ದಾನೆ. ತಾವೇ ತಯಾರಿಸಿದ ರೋಬೋಟ್ ಗೆ ರಫಿ ಎಂದು ಹೆಸರಿಟ್ಟಿದ್ದಾರೆ. ಬಾಲ್ಯದಿಂದಲೂ ಇಂತಹ ಆವಿಷ್ಕಾರಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿರುವ ಪ್ರತೀಕ್ 13ನೇ ವಯಸ್ಸಿನಲ್ಲೇ ತಮ್ಮ ಪ್ರತಿಭೆಗೆ ಹಲವು ಪದಕಗಳನ್ನು ಗೆದ್ದಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿನೂತನ ರೋಬೋಟ್ ತಯಾರಿಸಿದ್ದಕ್ಕೆ ಪ್ರತೀಕ್‌ಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!