ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತೃತೀಯ ರಂಗ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, 234 ಸ್ಥಾನಗಳ ಪೈಕಿ 154 ಸ್ಥಾನಗಳಲ್ಲಿ ಮಕ್ಕಲ್ ನೀಧಿ ಮಾಯಂ ಪಕ್ಷ ಸ್ಪರ್ಧಿಸಲಿದೆ.
234 ಸ್ಥಾನಗಳ ಪೈಕಿ ಕಮಲ್ ಹಾಸನ್ ಅವರ ಮಕ್ಕಲ್ ನೀಧಿ ಮಾಯಂ ಪಕ್ಷಕ್ಕೆ 154, ಐಜೆಕೆ ಮತ್ತು ನಟ ಶರತ್ ಕುಮಾರ್ ಅವರ ಎಐಎಸ್ ಎಂಕೆ ಪಕ್ಷಕ್ಕೆ ತಲಾ 40 ಸೀಟು ಹಂಚಿಕೆ ಮಾಡಿ ಸೋಮವಾರ ರಾತ್ರಿ ಆದೇಶ ಹೊರಡಿಸಲಾಗಿದೆ.
ಎಂಎನ್ಎಂ ಪ್ರಧಾನ ಕಾರ್ಯದರ್ಶಿ ಸಿ.ಕೆ.ಕುಮಾರವೇಲ್, ಎಐಎಸ್ಎಂಕೆ ಸಂಸ್ಥಾಪಕ ಶರತ್ಕುಮಾರ್ ಮತ್ತು ಐಜೆಕೆ ನಾಯಕ ರವಿ ಪಚಮುತ್ತು ಸೋಮವಾರ ರಾತ್ರಿ ಸುಮಾರು 11.45ರ ವೇಳೆಗೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ತಮಿಳುನಾಡಿನ ಹೆಮ್ಮೆ ಮತ್ತು ವೈಭವವನ್ನು ಪುನಃಸ್ಥಾಪಿಸುವ ಸಾಮಾನ್ಯ ಕಾರ್ಯಸೂಚಿಯೊಂದಿಗೆ, ಒಟ್ಟಾಗಿ ಚುನಾವಣೆಗೆ ಮುಂದಾಗಿರುವುದಾಗಿ ಒಪ್ಪಂದಕ್ಕೆ ನಾಯಕರು ಸಹಿ ಮಾಡಿದ್ದಾರೆ
ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದೆ.