ʻಬಾಡಿ ಶೇಮಿಂಗ್‌ʼ ನಿಂದನೆಗೆ ಅಪ್ರಾಪ್ತ ಬಾಲಕನಿಂದ ಸಹಪಾಠಿಯ ಬರ್ಬರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಬಾಡಿ ಶೇಮಿಂಗ್ ಮಾಡಿದ್ದಕ್ಕಾಗಿ ಮೇ 14 ರಂದು ಶನಿವಾರ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿ ತನ್ನ ಸ್ನೇಹಿತನನ್ನು ʻಹುಡುಗಿʼ ಎಂದು ಕರೆದಿದ್ದಕ್ಕಾಗಿ ಕೃತ್ಯ ನಡೆದಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿ ಹಲವು ಬಾರಿ ತನ್ನ ಸ್ನೇಹಿತನನ್ನು ಬಾಡಿ ಶೇಮಿಂಗ್‌ ಬಗ್ಗೆ ನಿಂದಿಸಿದ್ದನಂತೆ. ಮತ್ತೊಮ್ಮೆ ಈ ರೀತಿ ನಡೆದುಕೊಳ್ಳದಂತೆ ಮನವಿ ಮಾಡದರೂ ತನ್ನ ಪ್ರವೃತ್ತಿಯನ್ನು ಮುಂದುವರೆಸಿದ್ದರಿಂದ ಆರೋಪಿ ವಿದ್ಯಾರ್ಥಿ ಈ ಖರತ್ಯಕ್ಕೆ ಕೈ ಹಾಕಿದ್ದಾನೆ. ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತನನ್ನು ಹೊರಗೆ ಕರೆದೊಯುದು ಕಲ್ಲಕುರಿಚಿ ಜಿಲ್ಲೆಯ ಹೆದ್ದಾರಿಯ ಶಾಲೆಯ ಸಮೀಪ ಕುಡುಗೋಲು ಹಾಗೂ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ ಎಂದಿದ್ದಾರೆ.

ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ.ಸರಣ್ಯ ಜೈಕುಮಾರ್ ಮಾತನಾಡಿ, ಬಾಡಿ ಶೇಮಿಂಗ್ ಆತಂಕ, ಖಿನ್ನತೆಗೆ ಕಾರಣವಾಗುತ್ತದೆ, ದೇಹದ ಡಿಸ್ಮಾರ್ಫಿಕ್ ಡಿಸಾರ್ಡರ್ ಅನ್ನು ಉಂಟುಮಾಡುತ್ತದೆ. ಇಂತಹ ಹೇಳಿಕೆಗಳು ಕೋಪ ಅಥವಾ ತೀವ್ರ ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ ಎಂದಿದ್ದಾರೆ.

ಬಾಡಿ ಶೇಮಿಂಗ್ ಆರೋಪದ ಮೇಲೆ 12ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಹತ್ಯೆ ಮಾಡಿರುವ ಘಟನೆ ತಜ್ಞರನ್ನು ಆತಂಕಕ್ಕೆ ದೂಡಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತ ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!