ಪಲ್ಲಕ್ಕಿ ಉತ್ಸವದ ಮೇಲಿನ ನಿಷೇಧ ಆದೇಶವನ್ನು ಹಿಂಪಡೆದ ತಮಿಳುನಾಡು ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನಲ್ಲಿ ವಿವಾದಕ್ಕೆ ಕಾರಣವಾಗಿದ್ದ ಪಲ್ಲಕ್ಕಿ ಉತ್ಸವದ ಮೇಲಿನ ಹೇರಿದ್ದ ನಿಷೇಧ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ.
ಇತ್ತೀಚೆಗೆ ಮೈಲಾದುತುರೈ ಜಿಲ್ಲೆಯ ಧರ್ಮಪುರಿಂ ಅಧೀನಂ ಮಠದಲ್ಲಿ ಶ್ರೀಗಳನ್ನು ಭಕ್ತರು ಮತ್ತು ಶಿಷ್ಯರು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಆಚರಣೆಗೆ ಅನುಮತಿ ನಿರಾಕರಿಸಲಾಗಿತ್ತು.
ಇದು ತಮಿಳುನಾಡಿನ ರಾಜಕೀಯದಲ್ಲಿ ವಿವಾದ ಹುಟ್ಟು ಹಾಕಿತ್ತು. ಮಠದಲ್ಲಿನ ಈ ಸಂಪ್ರದಾಯವು ಮಾನವನ ಘನತೆಗೆ ಕುಂದು ಉಂಟು ಮಾಡುತ್ತದೆ ಎಂದು ಜಿಲ್ಲಾಡಳಿತ ಹೇಳಿತ್ತು, ಈ ಆಚರಣೆಯನ್ನು ನಿಷೇಧಿಸಿತ್ತು.
ತಮಿಳುನಾಡು ಸರ್ಕಾರದ ನಿಷೇಧ ಆದೇಶವನ್ನು ಪ್ರತಿಪಕ್ಷಗಳು ವಿರೋಧಿಸಿದ್ದವು. ವಿಧಾನಸಭೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ರಾಜ್ಯದ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತಾವೇ ಹೋಗಿ ಪಲ್ಲಕ್ಕಿ ಹೊರುತ್ತೇನೆ ಎಂದು ಹೇಳಿದ್ದರು.
ಈ ಆಚರಣೆ ಶಿಷ್ಯರಿಂದ ತಮ್ಮ ಗುರುವಿನ ಆರಾಧನೆಯನ್ನು ಸಂಕೇತಿಸುತ್ತದೆ ಇಂತಹ ಆಚರಣೆ ನಿಷೇಧಿಸುವುದು ಸರಿಯಲ್ಲ ಎಂದು ಒತ್ತಾಯಿಸಲಾಗಿತ್ತು.
ಇದೀಗ ಸರಕಾರ ಒತ್ತಡಗಳಿಗೆ ಮಣಿದು ಪಲ್ಲಕ್ಕಿ ಉತ್ಸವದ ಮೇಲಿನ ಹೇರಿದ್ದ ನಿಷೇಧ ಆದೇಶವನ್ನು ಹಿಂಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!