ಒಂಟಿಯಾಗಿರುವುದು ಬೋರೋ ಬೋರು!.. ವಧು ಬೇಕೆಂದು ಪಟ್ಟಣದ ತುಂಬೆಲ್ಲಾ ಪೋಸ್ಟರ್‌ ಹಾಕಿದ ಯುವಕ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮದುವೆ ಜೀವನದ ಅತ್ಯಂತ ಪ್ರಮುಖ ಘಟ್ಟ. ಈ ಹಂತಕ್ಕೆ ಕಾಲಿಡುತ್ತಿದ್ದಂತೆ ಯುವಕ- ಯುವತಿಯರು ತಮಗೆ ಸೂಕ್ತವೆನಿಸುವ ಸಂಗಾತಿಗಳನ್ನು ಹುಡುಕಿಕೊಳ್ಳಲು ಪ್ರಯತ್ನಗಳನ್ನು ಆರಂಭಿಸುತ್ತಾರೆ. ಈ ಯತ್ನ ಸೂಸೂತ್ರವಾಗಿ ಸಾಗಿದರೆ ಮುಂದಿನ ಹಂತ ದಾಂಪತ್ಯ ಜೀವನ. ಆದರೆ ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಸೂಕ್ತ ಸಂಗಾತಿಗಳು ಸಿಗುವುದಿಲ್ಲ. ಇಲ್ಲೊಬ್ಬ ವ್ಯಕ್ತಿಯದ್ದೂ ಅದೇ ಕತೆ. ಮದುವೆಯಾಗಲು ಹುಡುಗಿ ಹುಡುಕಿ ಸುಸ್ತಾದ ವ್ಯಕ್ತಿ ಒಂಟಿ ಜೀವನದಿಂದ ಬೇಸತ್ತು ಹುಡುಗಿಗಾಗಿ ಊರು ತುಂಬಾ ತನ್ನ ಪ್ರೊಪೈಲ್‌ ಇರುವ ಪೋಸ್ಟರ್‌ನನ್ನು ಹಾಕಿದ್ದಾನೆ.

What is the perfect age to get married, as per the zodiac signs | The Times  of Indiaತಮಿಳುನಾಡಿನ ಮಧುರೈನ ವಿಲ್ಲುಪುರಂನ ನಿವಾಸಿ ಎಂ.ಎಸ್.ಜಗನ್ ʼಸೂಕ್ತ ವಧುವಿಗಾಗಿʼ ಪಟ್ಟಣದಾದ್ಯಂತ ದೊಡ್ಡ ಪೋಸ್ಟರ್‌ಗಳನ್ನು ಹಾಕಿದ್ದು ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ 27 ವರ್ಷದ ಎಂ.ಎಸ್ ಜಗನ್ ಹಲವಾರು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದಾರೆ. ಈ ಸಂಬಂಧ ಬ್ರೋಕರ್‌ಗಳು ಹಾಗೂ ಮ್ಯಾಟ್ರಿಮೋನಿ ಸೈಟ್‌ನಲ್ಲೂ ಪ್ರೊಫೈಲ್ ಹಾಕಿ  ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಜಗನ್ ಮಧುರೈ ನಗರದಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಹೊಂದಿರುವ ದೊಡ್ಡ ಪೋಸ್ಟರ್‌ಗಳನ್ನು ಹಾಕಿ ಆಸಕ್ತ ಯುವತಿಯರು ಸಂಪರ್ಕಿಸುವಂತೆ ಕೋರಿದ್ದಾರೆ.
ಈ ಪೋಸ್ಟರ್ ಗಳಲ್ಲಿ ಜಗನ್ ತಮ್ಮ ಚಿತ್ರ ನಕ್ಷತ್ರ ಚಿಹ್ನೆ, ಜಾತಿ, ವೃತ್ತಿ, ಆದಾಯ ಮತ್ತು ವಿಳಾಸದ ವಿವರಗಳನ್ನು ನಮೂದಿಸಿದ್ದಾರೆ. ಹಾಗೂ ತಾವು ಹೊಂದಿರುವ ತುಂಡು ಭೂಮಿಯ ವಿವರವನ್ನೂ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗನ್‌, ನಾನು ಕಳೆದ ಐದು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದೇನೆ, ಆದರೆ ಯಶಸ್ವಿಯಾಗಲಿಲ್ಲ. ವಿವಿಧ ಯೋಜನೆಗಳಿಗಾಗಿ ಅನೇಕ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಿದ್ದೆ. ನನಗಾಗಿ ಏಕೆ ಇಂತಹ ಪೊಸ್ಟರ್‌ ಒಂದನ್ನು ವಿನ್ಯಾಸಗೊಳಿಸಬಾರದು ಎಂಬ ಆಲೋಚನೆ ಬಂದಾಗ ಈ ಪೋಸ್ಟರ್‌ ಗಳನ್ನು ಹಾಕಿದ್ದೇನೆ ಎಂದು ಹೇಳಿದ್ದಾರೆ.
ನಾನು ಪೋಸ್ಟರ್‌ ಹಾಕಿದ್ದರ ಬಗ್ಗೆ ಹಲವರು ತಮಾಷೆ ಮಾಡುತ್ತಾರೆ. ಆದರೆ ಈ ಅಪಹಾಸ್ಯಗಳಿಗೆ ನಾನು ಹೆದರುವುದಿಲ್ಲ. ನನ್ನ ಪೋಸ್ಟರ್‌ ಗಳನ್ನು ಇರಿಸಿಕೊಂಡು ತುಂಬಾ ಜನ ಮೀಮ್‌ಗಳನ್ನು ಮಾಡುತ್ತಿದ್ದಾರೆ, ಅದರಿದೇನು ನನಗೆ ಬೇಸರವಾಗಿಲ್ಲ. ಅವರ ಖರ್ಚಿನಲ್ಲಿ ನಾನು ವೈರಲ್ ಆಗುತ್ತಿದ್ದೇನೆ.. ಅದಕ್ಯಾಕೆ ಬೇಸರ ಪಡಲಿ ಎನ್ನುತ್ತಾರೆ.
ಈ ಹಿಂದೆ ಮಾರ್ಚ್‌ ನಲ್ಲಿ ಗ್ಲೆಂಡ್‌ನ  ಒಂಟಿ ಪುರುಷನೊಬ್ಬ ಹೆಂಡತಿ ಬೇಕು ಎಂದು ಜಾಹೀರಾತುಗಳನ್ನು ಹಾಕಿದ್ದು ಭಾರೀ ವೈರಲ್‌ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!