Tuesday, July 5, 2022

Latest Posts

ಮದ್ಯ ಮಾರಾಟದಲ್ಲಿ ದಾಖಲೆ ಬರೆದ ತಮಿಳುನಾಡು: ಒಂದೇ ದಿನದಲ್ಲಿ ಎಷ್ಟು ಸೇಲ್ ಆಗಿದೆ ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಮಿಳುನಾಡಿನಲ್ಲಿ ಕೇವಲ ಒಂದು ದಿನದಲ್ಲಿ 164 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ. ಈ ಮೂಲಕ ಇಲ್ಲಿನ ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (ಟ್ಯಾಸ್ಮಾಕ್) ದಾಖಲೆ ಬರೆದಿದೆ.
ಲಾಕ್​​ಡೌನ್ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಎಲ್ಲಾ ಮದ್ಯದಂಗಡಿಗಳು ಮತ್ತು ಬಾರ್‌ಗಳನ್ನು ಸೋಮವಾರ ತೆರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಮಧುರೈ ವಲಯದಲ್ಲಿ ಗರಿಷ್ಠ 49.54 ಕೋಟಿ ರೂಪಾಯಿ, ಚೆನ್ನೈ ವಲಯದಲ್ಲಿ 42.96 ಕೋಟಿ ರೂಪಾಯಿ, ಸೇಲಂ ವಲಯದಲ್ಲಿ 38.72 ಕೋಟಿ ರೂಪಾಯಿ ಮತ್ತು ತಿರುಚ್ಚಿ ವಲಯದಲ್ಲಿ 33.65 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಟಾಸ್ಮಾಕ್‌ನ ವರದಿ ಹೇಳಿದೆ.
ಇನ್ನು ಕೊಯಮತ್ತೂರು ವಲಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಕಾರಣಕ್ಕೆ ಈ ಪ್ರದೇಶದಲ್ಲಿ ಯಾವುದೇ ಮಾರಾಟ ನಡೆದಿಲ್ಲ. ನೀಲಗಿರಿ, ಈರೋಡ್, ತಿರುಪ್ಪೂರು, ಕರುರು, ನಮಕ್ಕಲ್, ತಂಜಾವೂರು, ತಿರುವಾವೂರ್, ನಾಗಪಟ್ಟಣಂ, ಮತ್ತು ಮೈಲಾದುತುರೈನಲ್ಲಿನ ಮದ್ಯದಂಗಡಿಗಳು ಮುಚ್ಚಲ್ಪಟ್ಟಿವೆ.
ತಮಿಳುನಾಡಿನ 5,338 ಅಂಗಡಿಗಳಲ್ಲಿ 2,900 ಅಂಗಡಿಗಳನ್ನು ಸೋಮವಾರ ತೆರೆಯಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss