ತಮಿಳುನಾಡಿನ ಶಿವಕಾಶಿ ದೇಗುಲದ ಗೋಪುರದಲ್ಲಿ ಬೆಂಕಿ: ಇದಕ್ಕೆ ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ವಿರುದುನಗರದ ಶಿವಕಾಶಿಯಲ್ಲಿರುವ ಭದ್ರಕಾಳಿ ದೇವಾಲಯದ ರಾಜಗೋಪುರದಲ್ಲಿ ಬೆಂಕಿ ಕಾಣಿಸಿದೆ. ಗೋಪುರದ ನವೀಕರಣ ಕಾರ್ಯ ನಡೆಯುತ್ತಿದ್ದು, ಗೋಪುರವನ್ನು ಮರದ ಚೌಕಟ್ಟಿನಿಂದ ಮುಚ್ಚಲಾಗಿತ್ತು. ದೇಗುಲದ ಸಮೀಪದಲ್ಲಿ ಮದುವೆ ಮನೆಯ ಸಂಭ್ರಮದಲ್ಲಿ ಪಟಾಕಿಗಳನ್ನು ಸಿಡಿಸಿದ್ದು, ಇದರಿಂದಾಗಿ ಬೆಂಕಿ ಹತ್ತಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.

ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸಲಾಗಿದೆ. ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಶಿವಕಾಶಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!