Monday, July 4, 2022

Latest Posts

ನಟನೆ ಜೊತೆಗೆ ಬರವಣಿಗೆಯಲ್ಲೂ ಸೈ ಎನಿಸಿಕೊಂಡರಂತೆ ಮಿಲ್ಕಿ ಬ್ಯೂಟಿ: ತಮನ್ನಾ ನಿಜವಾಗಿಯೂ ಪುಸ್ತಕ ಬರೆದ್ರಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಿನಿರಂಗದಲ್ಲಿ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಇದೀಗ ಬರವಣಿಗೆಯಲ್ಲಿ ಆಸಕ್ತಿ ತೋರಿರುವ ಇವರು, ತಮ್ಮ ಬುಕ್ ಒಂದನ್ನು ರಿಲೀಸ್ ಮಾಡಿದ್ದಾರಂತೆ.
ಹೌದು. ನಟಿ ತಮನ್ನಾ ‘Back to the Roots’ ಎಂಬ ಪುಸ್ತಕ ಬರೆದು , ಪೆಂಗ್ವಿನ್ ರ‍್ಯಾಡಮ್ ಹೌಸ್ ಇಂಡಿಯಾ ಪಬ್ಲಿಶ್ ಮಾಡಿದೆ. ಈ ಪುಸ್ತಕ  ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದಿದ್ದಾರೆ.
ಈ ಪುಸ್ತಕದಲ್ಲಿ ನಮ್ಮ ಹಿರಿಯರು ಆರೋಗ್ಯವಾಗಿರಲು ಯಾವೆಲ್ಲಾ ರೀತಿಯ ದಿನಚರಿಯನ್ನು ರೂಪಿಸಿಕೊಂಡಿದ್ದರು. ಜೊತೆಗೆ ರೋಗ ನಿರೋಧಕಗಳನ್ನು ಹೆಚ್ಚಿಸಲು ಹಾಗೂ ಈಗಿನ ಕಾಲದಲ್ಲಿ ಆರೋಗ್ಯಕರ ಜೀವನ ಬಿಟ್ಟು ಬದುಕುತ್ತಿರುವುದಾದರೂ ಹೇಗೆ ಎನ್ನುವ ವಿಷಯಗಳ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಾರೆ.
ಈ ಬಗ್ಗೆ ತಿಳಿಸಿದ ತಮನ್ನಾ, ಇದು ನನ್ನ ಮೊದಲ ಪುಸ್ತಕ. ನಮ್ಮ ಪ್ರಾಚೀನ ಕಾಲದ ದಿನಚರಿ ಫಾಲೋ ಮಾಡುವುದರಿಂದ ಪಡೆದ ಅನುಭವಗಳನ್ನು ಮತ್ತಷ್ಟು ಜನ ಕೂಡ ಪಡೆಯಬೇಕು. ಇದು ಕೇವಲ ಫಿಟ್ ಆಗಿ ಇರಬೇಕು ಅನ್ನುವುದಕ್ಕಿಂತ ವಿಭಿನ್ನ ಆಲೋಚನೆಗಳನ್ನು ಹೊಂದಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss