Thursday, August 11, 2022

Latest Posts

ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಉದ್ಯಮವನ್ನು ಖರೀದಿಸಿದ ರುಚಿ ಸೋಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಬಾ ರಾಮ್ ದೇವ್ ಸ್ಥಾಪನೆಯ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮವನ್ನು 60 ಕೋಟಿ ರೂಪಾಯಿಗಳಿಗೆ ರುಚಿ ಸೋಯ ಖರೀದಿಸಿದೆ.
ಈ ಮೂಲಕ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಪತಂಜಲಿಯ ನಿರ್ದೇಶಕ ಮಂಡಳಿ ಮೇ.10 ರಂದು ಉದ್ಯಮ ವರ್ಗಾವಣೆಗೆ ಅನುಮೋದನೆ ನೀಡಿದೆ.
ಸಂಸ್ಥೆಯ ಸ್ವಾಧೀನ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ’60 ಕೋಟಿ ರೂಪಾಯಿಗಳಿಗೆ ಪತಂಜಲಿ ಬಿಸ್ಕೇಟ್ ಉದ್ಯಮವನ್ನು ಖರೀದಿಸಲಾಗಿದೆ ಎಂದು ರುಚಿ ಸೋಯಾ ಇಂಡಸ್ಟ್ರೀಸ್’ ಹೇಳಿಕೆ ನೀಡಿದೆ. ;ತಮ್ಮ ಈಗಿರುವ ಉದ್ಯಮವನ್ನು ವಿಸ್ತರಣೆ ಮಾಡುವುದು ಖರೀದಿಯ ಉದ್ದೇಶವಾಗಿದೆ ಎಂದು ಸೋಯಾ ಇಂಡಸ್ಟ್ರೀಸ್ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss