ಸಾಮಾಗ್ರಿಗಳು
ಕ್ಯಾಪ್ಸಿಕಂ
ಕ್ಯಶ್ಯೂ
ಈರುಳ್ಳಿ
ಬೆಳ್ಳುಳ್ಳಿ
ಶುಂಠಿ
ಟೊಮ್ಯಾಟೊ
ಹುಣಸೆಹುಳಿ
ಎಳ್ಳು
ಶೇಂಗಾ
ಸಾಂಬಾರ್ ಪುಡಿ
ಖಾರದಪುಡಿ
ಜೀರಿಗೆ
ಮಾಡುವ ವಿಧಾನ
ಮೊದಲು ಶೇಂಗಾ, ಎಳ್ಳು ಹುರಿದು ಇಡಿ, ಇದಕ್ಕೆ ಹುಣಸೆ ಹುಳಿ, ಶುಂಠಿ ಬೆಳ್ಳುಳ್ಳಿ ಹಾಕಿ ಪೇಸ್ಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ, ಗೋಡಂಬಿ, ಜೀರಿಗೆ, ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಕ್ಯಾಪ್ಸಿಕಂ ಹಾಕಿ, ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಅದಕ್ಕೆ ಪೇಸ್ಟ್ ಹಾಕಿ, ಉಪ್ಪು ಹಾಕಿ, ಬಾಡಿಸಿ
ನಂತರ ಬೇಕಾದಷ್ಟು ನೀರು ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ
ಎಣ್ಣೆ ಬಿಟ್ಟ ನಂತರ ಗ್ರೇವಿ ರೆಡಿ