Monday, August 15, 2022

Latest Posts

ಹೋಟೆಲ್ ಥರಾನೇ ಮನೆಯಲ್ಲೇ ಕಬಾಬ್ ಮಾಡಿ, ಟೇಸ್ಟಿ ರೆಸಿಪಿ ಇಲ್ಲಿದೆ..

ಕಬಾಬ್ ಎಂದರೆ ಯಾರಿಗಿಷ್ಟ ಇಲ್ಲ ಹೇಳಿ, ಕಬಾಬ್ ತಿನ್ನೋದಕ್ಕೆ ಹೋಟೆಲ್‌ಗೆ ಹೋಗಬೇಕಿಲ್ಲ. ಹೋಟೆಲ್ ರೀತಿ ಟೇಸ್ಟ್ ಬರಿಸಿ ಮನೆಯಲ್ಲೇ ಮಾಡಿ ತಿನ್ನಬಹುದು. ಮನೆಯಲ್ಲೇ ಕಬಾಬ್ ಮಾಡೋದು ಹೀಗೆ..

ಸಾಮಾಗ್ರಿಗಳು

ಚಿಕನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಕರಿಬೇವು
ಕಬಾಬ್ ಪುಡಿ
ನಿಂಬೆಹಣ್ಣು
ಮೊಸರು
ಮೊಟ್ಟೆ ಅಥವಾ ಕಾರ್ನ್ ಫ್ಲೋರ್

ಮಾಡುವ ವಿಧಾನ

ಮೊದಲು ಚಿಕನ್ ತೊಳೆದು ಅದಕ್ಕೆ ಅರಿಶಿಣ ಮೊಸರು ಹಾಕಿ ಪಕ್ಕಕಿಡಿ.
ಅರ್ಧ ಗಂಟೆ ನಂತರ ಇದಕ್ಕೆ ಮೇಲೆ ನಮೂದಿಸಿದ ಎಲ್ಲ ವಸ್ತುಗಳನ್ನು ಹಾಕಿ ಎರಡು ಗಂಟೆಯಾದರೂ ಮ್ಯಾರಿನೇಟ್ ಮಾಡಿ.
ನಂತರ ಕಾದ ಎಣ್ಣೆಗೆ ಕಬಾಬ್ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ ಬಿಸಿ ಬಿಸಿ ತಿನ್ನಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss