ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ:
ದೋಸೆ ಅಕ್ಕಿ ಒಂದು ಲೋಟ, ನೀರು,
ಒಗ್ಗರಣೆಗೆ ಬೇಕಾದ ಸಾಮಗ್ರಿ
ಮಾಡುವ ವಿಧಾನ:
ದೋಸೆ ಅಕ್ಕಿಯನ್ನು ಚೆನ್ನಾಗಿ ನೆನೆಸಿಟ್ಟುಕೊಳ್ಳಿ. ನೆನೆದ ಅಕ್ಕಿಯನ್ನು ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಸ್ವಲ್ಪ ಜಾಸ್ತಿಯೇ ಎಣ್ಣೆ ತೆಗೆದಿಟ್ಟುಕೊಳ್ಳಿ. ಉದ್ದಿನ ಬೇಳೆ, ಒಣಮೆಣಸಿನ ಕಾಯಿ, ಬೇವಿನೆಲೆ, ಸಾಸಿವೆಗಳನ್ನು ಹಾಕಿ ಒಗ್ಗರಣೆ ರೆಡಿಮಾಡಿ. ಅದಕ್ಕೆ ಅಕ್ಕಿ ಹಿಟ್ಟನ್ನು ಹಾಕಿ ಬೇಯಲು ಬಿಡಿ. ಚೆನ್ನಾಗಿ ಬೆಂದ ಕಲ್ತಪ್ಪಂ ಬೆಳಗ್ಗಿನ ತಿಂಡಿಗೂ ಬಲುರುಚಿ.