ಪತ್ರೊಡೆ ಹೀಗೆ ಮಾಡಿದ್ರೆ ರುಚಿಯೋ ರುಚಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿ

ಕೆಸುವಿನ ಎಲೆ-25
ಹೆಸರುಕಾಳು -ಒಂದೂವರೆ ಕಪ್
ತೆಂಗಿನ ತುರಿ- ಒಂದು ಕಪ್
ಒಣಮೆಣಸಿನ ಕಾಯಿ-18
ಹುಣಸೇಹುಳಿ- ನಿಂಬೆಗಾತ್ರ
ಇಂಗು
ತೆಂಗಿನೆಣ್ಣೆ
ಉಪ್ಪು
ನೀರು

ಮಾಡುವ ವಿಧಾನ:

ಹೆಸರುಕಾಳನ್ನು ಮೃದುವಾಗುವ ತನಕ ಚೆನ್ನಾಗಿ ನೆನೆಸಿ ನೀರು ಬಸಿದಿಡಿ. ಒಣಮೆಣಸನ್ನು ತೆಂಗಿನೆಣ್ಣೆಯಲ್ಲಿ ಕರಿದಿಟ್ಟುಕೊಳ್ಳಿ. ಕರಿದ ಮೆಣಸಿಗೆ ತೆಂಗಿನ ತುರಿ, ಹುಳಿ ಸೇರಿಸಿ ತರತರಿಯಾಗಿ ರುಬ್ಬಿ. ಇದಕ್ಕೆ ಹೆಸರುಕಾಳು,ಇಂಗು,ಉಪ್ಪು ಸೇರಿಸಿ ರುಬ್ಬಿ. ದಪ್ಪ ರವೆಯಂತಾದಾಗ ತೆಗೆದು ಎಣ್ಣೆ ಸೇರಿಸಿ ಕಲಸಿ. ಈಗ ಪತ್ರೋಡೆ ಮಸಾಲೆ ಸಿದ್ಧವಾಯಿತು. ಶುಚಿಮಾಡಿದ ಕೆಸುವಿನ ಎಲೆಯನ್ನು ತೆಗೆದು ಮಸಾಲೆಯನ್ನು ಸುರಿದು ಸುರಳಿ ಸುತ್ತಿಕೊಳ್ಳಿ. ಈ ಸುರಳಿಯನ್ನು ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿಟ್ಟು ಅರ್ಧಗಂಟೆಗಳ ಕಾಲ ಬೇಯಿಸಿ. ಬಿಸಿ ಬಿಸಿ ಪತ್ರೊಡೆ ರೆಡಿ..ತೆಂಗಿನೆಣ್ಣೆಯನ್ನು ಹಾಕಿ ತಿನ್ನಲು ಬಲುರುಚಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!