RECIPE| ಎಂದಾದರೂ ಸಬ್ಬಕ್ಕಿ ಉಪ್ಪಿಟ್ಟು ಟ್ರೈ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ವಸ್ತುಗಳು:

ಸಬ್ಬಕ್ಕಿ 1/2 ಕಪ್, ಆಲೂಗಡ್ಡೆ ಮತ್ತು ಇತರ ತರಕಾರಿ ಬೇಯಿಸಿದ್ದು 1 ಕಪ್, ಹುರಿದ ಶೇಂಗಾ (ನೆಲ ಕಡಲೆ) ಹುಡಿ 2-3 ಚಮಚ, ಹೆಚ್ಚಿದ ಈರುಳ್ಳಿ 1, ಕಾಯಿ ತುರಿ 1 ಸೌಟು.

ಒಗ್ಗರಣೆಗೆ: ಉದ್ದಿನ ಬೇಳೆ, ಕಡಲೇ ಬೇಳೆ ತಲಾ 1 ಚಮಚ, ಹೆಚ್ಚಿದ ಹಸಿ ಮೆಣಸು 3, ರುಚಿಗೆ ಉಪ್ಪು, ಲಿಂಬು 1, ಎಣ್ಣೆ, ಒಣ ಮೆಣಸು, ಇಂಗು, ಕರಿ ಬೇವು

ತಯಾರಿಕಾ ವಿಧಾನ: ರಾತ್ರಿ ನೆನೆ ಹಾಕಿದ ಸಬ್ಬಕ್ಕಿಯನ್ನು ನೀರಿನಿಂದ ಪ್ರತ್ಯೇಕಿಸಿ. ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಒಣ ಮೆಣಸು, ಇಂಗು, ಉದ್ದಿನ ಬೇಳೆ, ಕಡಲೇ ಬೇಳೆಯನ್ನು ಒಂದೊಂದಾಗಿ ಹಾಕಿ ಕೆಂಪಗೆ ಹುರಿದು, ಹೆಚ್ಚಿದ ಹಸಿ ಮೆಣಸು ಕರಿ ಬೇವು, ಈರುಳ್ಳಿ ಹಾಕಿ ಕರಿಯಿರಿ. ನಂತರ ನೆನೆಸಿದ ಸಬ್ಬಕ್ಕಿ ಹಾಕಿ ಒಂದೆರಡು ನಿಮಿಷ ಮುಚ್ಚಿ. ಬೇಯಿಸಿದ ತರಕಾರಿ, ಹುರಿದ ಶೇಂಗಾ ಹುಡಿ, ಲಿಂಬೆ ರಸ, ಕಾಯಿ ತುರಿ ಸೇರಿಸಿ. ಬೇಕಿದ್ದಲ್ಲಿ ಸ್ವಲ್ಪ ಸಕ್ಕರೆ ಸೇರಿಸ ಬಹುದು. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!