ಸಾಮಾಗ್ರಿಗಳು
ರವೆ
ಉಪ್ಪು
ಓಂ ಕಾಳು
ಈರುಳ್ಳಿ
ಹಸಿಮೆಣಸು
ಕ್ಯಾರೆಟ್
ಬೀಟ್ರೋಟ್
ಮೊಳಕೆ ಕಾಳುಗಳು
ಮಾಡುವ ವಿಧಾನ
ಮೊದಲು ಮೊಳಕೆ ಕಾಳುಗಳನ್ನು ಕಟರ್ಗೆ ಹಾಕಿ ಸಣ್ಣಗೆ ಪುಡಿ ಮಾಡಿಕೊಳ್ಳಿ
ಕ್ಯಾರೆಟ್, ಬೀಟ್ರೂಟ್ ತುರಿಯಿರಿ
ನಂತರ ಸಣ್ಣಗೆ ಈರುಳ್ಳಿ ಹೆಚ್ಚಿಕೊಳ್ಳಿ
ಇವೆಲ್ಲವನ್ನು ರವೆಗೆ ಹಾಕಿ ನೀರು ಹಾಕಿ ನೆನೆಸಿಡಿ
ಒಂದು ಗಂಟೆ ನೆಂದ ನಂತರ ಹಂಚಿನ ಮೇಲೆ ರವೆ ರೊಟ್ಟಿ ತಟ್ಟಿ, ಎಣ್ಣೆ ಹಾಕಿ ಬೇಯಿಸಿ
ತುಪ್ಪ, ಚಟ್ನಿಯೊಂದಿಗೆ ಬಿಸಿ ಬಿಸಿ ಸೇವಿಸಿ…