ಹೊಸ ದಿಗಂತ ವರದಿ, ಮಳವಳ್ಳಿ :
ಟಾಟಾ ಏಸ್ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಳವಳ್ಳಿ ತಾಲ್ಲೂಕಿನ ದೊಡ್ಡಭೂವಳ್ಳಿ-ನೆಲ್ಲಿಗೆರೆ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಮಳವಳ್ಳಿ ತಾಲ್ಲೂಕಿನ ಕಗ್ಗಹಳ್ಳಿ ಗ್ರಾಮದ ಶಿವಮೂತರ್ಿ ಅವರ ಪತ್ನಿ ಶಶಿಕಲಾ(45) ಮೃತಪಟ್ಟ ಮಹಿಳೆ. ಕಗ್ಗಹಳ್ಳಿ ಗ್ರಾಮದಿಂದ ದೊಡ್ಡಭೂವಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಅಕ್ಕನ ಮಗ ಪ್ರಮೋದ್ ಜೊತೆ ಬೈಕ್ನಲ್ಲಿ ಶಶಿಕಲಾ ತೆರಳುತ್ತಿದ್ದರು. ವೇಳೆ ಎದುರುಗಡೆಯಿಂದ ಬಂದ ಟಾಟಾ ಎಸ್ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಶಶಿಕಲಾ ಸ್ಥಳದಲ್ಲಿಯೇ ಸಾವನ್ನಪ್ಪಿದರು. ಬೈಕ್ ಸವಾರ ಪ್ರಮೋದ್ ಗಾಯಗೊಂಡಿದ್ದು, ಅವರು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕ್ಸತೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್ಐ ಕೆ.ಎಂ.ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ