ಬೆಂಕಿಗಾಹುತಿಯಾದ ಟಾಟಾ ನೆಕ್ಸಾನ್‌ ಇವಿ : ಕೇಂದ್ರದಿಂದ ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಪ್ರತಿಷ್ಟಿತ ಕಾರು ತಯಾರಿಕಾ ಕಂಪೆನಿಯಾದ ಟಾಟಾ ಕಂಪನಿಯ ನೆಕ್ಸಾನ್‌ ಇವಿ (ಎಲೆಕ್ಟ್ರಿಕ್) ಕಾರೊಂದು ಬೆಂಕಿಗಅಹುತಿಯಾದ ಘಟನೆ ಮುಂಬೈನಲ್ಲಿ ನಡೆದಿದೆ.

ಕಾರಿಗೆ ಬೆಂಕಿ ಆವರಿಸಕೊಳ್ಳುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದವು. ತಕ್ಷಣವೇ ಎಚ್ಚೆತ್ತುಕೊಂಡ ಟಾಟಾ ಕಂಪನಿಯು ಪ್ರಕರಣದ ತನಿಖೆಗೆ ಆದೇಶ ನೀಡಿತ್ತು. ಟಾಟಾ ಕಂಪನಿಯ ಎಲೆಕ್ಟ್ರಿಕ್‌ ಕಾರುಗಳು ಅತಿ ವಿಶ್ವಾಸಾರ್ಹ ಕಾರುಗಳು ಎಂಬ ನಂಬಿಕೆ ಗಳಿಸಿದ್ದವು. ದೇಶದಾದ್ಯಂತ ಹಲವಾರು ಜನರು ಇತ್ತೀಚೆಗೆ ಇವಿ ಕಾರುಗಳನ್ನು ಹೆಚ್ಚಾಗಿ ಖರೀದಿಸಿದ್ದರು. ಆದರೆ ಅಂಥಹ ವಿಶ್ವಾಸಾರ್ಹ ಕಾರುಗಳಿಗೇ ಬೆಂಕಿ ತಗುಲಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಟಾಟಾ ವಿಸ್ತಾರವಾದ ತನಿಖೆಗೆ ಆದೇಶ ನೀಡಿತ್ತು.

ಪ್ರಸ್ತುತ ಕೇಂದ್ರ ಸರ್ಕಾರವೂ ಕೂಡ ಈ ಪ್ರಕರಣದ ಕುರಿತು ಗಮನ ಹರಿಸಿದ್ದು ಸಾರಿಗೆ ಸಚಿವಾಲಯವು ಈ ಕುರಿತು ಸ್ವತಂತ್ರ ತನಿಖೆಗೆ ಆದೇಶ ನೀಡಿದೆ. ಈ ಘಟನೆಯ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚುವಂತೆ ಆದೇಶಿಸಲಾಗಿದ್ದು ಇದು ಮುಂದಿನ ದಿನಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!