ಟಾಟಾ ತೆಕ್ಕೆಗೆ ಕುಡಿಯುವ ನೀರಿನ ಬ್ರ್ಯಾಂಡ್ ಬಿಸ್ಲೆರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುಡಿಯುವ ನೀರಿನ ಬ್ರ್ಯಾಂಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಬಿಸ್ಲೆರಿಯನ್ನು ಬಿಸ್ಲೆರಿ ಇಂಟರ್‌ನ್ಯಾಷನಲ್‌ನಿಂದ ಟಾಟಾ ಕನ್ಸೂಮರ್ ಪ್ರಾಡಕ್ಟ್ ಲಿಮಿಟೆಡ್ ಸುಮಾರು ಏಳು ಸಾವಿರ ಕೋಟಿ. ರೂಗೆ ಖರೀದಿಸಿದೆ ಎಂದು ವರದಿಯಾಗಿದೆ.

ಬಿಸ್ಲೆರಿ ಇಂಟರ್‌ನ್ಯಾಷನಲ್ ಲಿಮಿಟೆಡ್ ರಮೇಶ್ ಚೌಹಾಣ್ ಒಡೆತನದಲ್ಲಿದೆ. ಈಗಾಗಲೇ ಇದೇ ಬ್ರ್ಯಾಂಡ್‌ನಿಂದ ಬಂದ ತಂಪು ಪಾನೀಯಗಳಾದ ಥಮ್ಸ್‌ಅಪ್‌ಮ ಗೋಲ್ಡ್ ಸ್ಟಾಟ್ ಹಾಗೂ ಲಿಮ್ಕಾವನ್ನು ಕೋಕಾ ಕೋಲಾಗೆ ಮಾರಾಟ ಮಾಡಿದ ಮೂರು ದಶಕಗಳ ನಂತರ ಇದೀಗ ಬಿಸ್ಲೆರಿಯನ್ನು ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಲಾಗಿದೆ.

ಒಪ್ಪಂದದ ಪ್ರಕಾರ ಮುಂದಿನ ಎರಡು ವರ್ಷಗಳ ವರೆಗೆ ಬಿಸ್ಲೆರಿ ಈಗಿರುವ ಮಾಲೀಕರ ಬಳಿಯೇ ಇರಲಿದೆ. 82 ವರ್ಷದ ಚೌಹಾಣ್ ಅವರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಿಸ್ಲೆರಿಯ ಮಾರುಕಟ್ಟೆಯನ್ನು ಮುಂದಿನ ಹಂತಕ್ಕೆ ಹೊತ್ತೊಯ್ಯುವ ಉತ್ತರಾಧಿಕಾರಿ ಇಲ್ಲದ ಕಾರಣ ಚೌಹಾಣ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಚೌಹಾಣ್‌ಗೆ ಪುತ್ರಿ ಜಯಂತಿಗೆ ಬ್ಯುಸಿನೆಸ್‌ನಲ್ಲಿ ಆಸಕ್ತಿ ಇಲ್ಲ ಎಂದು ಚೌಹಾಣ್ ಹೇಳಿದ್ದಾರೆ.

ಟಾಟಾ ಸಮೂಹ ಬಿಸ್ಲೆರಿಯನ್ನು ಇನ್ನೂ ಉತ್ತಮವಾಗಿ ನಿರ್ವಹಿಸುತ್ತದೆ ಹಾಗೂ ಮುಂದಿನ ಹಂತಕ್ಕೆ ಹೊತ್ತೊಯ್ಯುತ್ತದೆ ಎನ್ನುವ ನಿರೀಕ್ಷೆ ಇದೆ ಎಂದು ಚೌಹಾಣ್ ಹೇಳಿದ್ದಾರೆ. ಇತರ ಖರೀದಿದಾರರು ಉತ್ಸಾಹ ತೋರಿದ್ದಾರೆ ಆದರೆ ಟಾಟಾದ ಸಂಸ್ಕೃತಿ ಮತ್ತು ಸಮಗ್ರತೆಯ ಮೌಲ್ಯ ಇಷ್ಟವಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!