Thursday, July 7, 2022

Latest Posts

ತೌಕ್ತೆ ಚಂಡಮಾರುತ ಎಫೆಕ್ಟ್: ರಾಜ್ಯದಲ್ಲಿ 125 ಗ್ರಾಮ, 1047 ಕಿ.ಮೀ. ರಸ್ತೆ ಹಾನಿ ಸೇರಿದಂತೆ 209 ಕೋಟಿ ರೂ. ನಷ್ಟ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಾಜ್ಯಕ್ಕೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದ ಬರೋಬ್ಬರಿ 209.30 ಕೋಟಿ ರೂ. ನಷ್ಟವಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲು ಐಎಂಸಿಟಿ ತಂಡವನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಗಳ ಅನುಸಾರ ರಾಜ್ಯದ ಕರಾವಳಿ, ಮಲೆನಾಡು ಮತ್ತು ಉತ್ತರ ಆಂತರಿಕ ಜಿಲ್ಲೆಗಳ 125 ಗ್ರಾಮಗಳ ಮೇಲೆ ಪರಿಣಾಮ ಬೀರಿದ್ದು, ಮೂಲಸೌಕರ್ಯಗಳಿಗೆ ಸಾಕಷ್ಟು ಹಾನಿಯುಂಟಾಗಿದೆ.  ರಾಜ್ಯಕ್ಕೆ 209.30 ಕೋಟಿ ರೂ ನಷ್ಟವಾಗಿದ್ದು, ಅದರಲ್ಲಿ 1047 ಕಿ.ಮೀ. ರಸ್ತೆಗಳು, ಸಂರಕ್ಷಣಾ ಗೋಡೆಗಳು, 474 ಮನೆಗಳು, 71 ಸರ್ಕಾರಿ ಕಟ್ಟಡಗಳು, 263 ದೋಣಿಗಳು, 324 ಬಲೆಗಳು, 29 ಸಣ್ಣ ನೀರಾವರಿ ಯೋಜನೆಗಳಯ,107 ಕಿ.ಮೀ. ವಿದ್ಯುತ್ ಲೈನ್ ಗಳು, 79 ಟ್ರಾನ್ಸ್ ಫಾರ್ಮರ್ಸ್ ಗಳು ನಾಶವಾಗಿದೆ ಎಂದು ತಿಳಿಸಿದೆ.

ಚಂಡಮಾರುತದಿಂದ ಕರಾವಳಿ ಪ್ರದೇಶದ ರಕ್ಷಣೆ, ಹಾನಿಗೊಳಗಾದ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಮರು ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss