Wednesday, August 17, 2022

Latest Posts

ತೌಕ್ತೆ ಚಂಡಮಾರುತ: 6,784 ಮೀನುಗಾರಿಕಾ ದೋಣಿಗಳನ್ನು ಬಂದರು ತಲುಪಿಸಿದ ಇಂಡಿಯನ್ ಕೋಸ್ಟ್ ಗಾರ್ಡ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ತೌಕ್ತೆ ಚಂಡಮಾರುತ ಅಪ್ಪಳಿಸುವ ಮುನ್ನ ಮಹಾರಾಷ್ಟ್ರ ಹಾಗೂ ಗುಜರಾತ್ ನ 6,784 ಮೀನುಗಾರಿಕಾ ದೋಣಿಗಳನ್ನು ರಕ್ಷಿಸಲಾಗಿದೆ ಎಂದು ಇಂಡಿಯನ್ ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಇಂಡಿಯನ್ ಕೋಸ್ಟ್ ಗಾರ್ಡ್, ಮೀನುಗಾರಿಕಾ ಇಲಾಖೆಯೊಂದಿಗೆ ಪರಿಣಾಮಕಾರಿ ಮತ್ತು ನಿರಂತರ ಸಂಪರ್ಕ ಹೊಂದಿದ್ದು, ಏರ್ ಕ್ರಾಫ್ಟ್, ಇಂಡಿಯಾ ಕೋಸ್ಟ್ ಗಾರ್ಡ್ ನ ದೋಣಿಗಳ ಮೂಲಕ ಸಮುದ್ರದಲ್ಲಿದ್ದ ಮಹಾರಾಷ್ಟ್ರದ 4,526 ಮೀನುಗಾರಿಕಾ ದೋಣಿಗಳು ಮತ್ತು ಗುಜರಾತ್‌ನ 2,258 ದೋಣಿಗಳನ್ನು ಸುರಕ್ಷಿತವಾಗಿ ಬಂದರಿಗೆ ತರಲಾಗಿದೆ ಎಂದು ತಿಳಿಸಿದೆ.ತೌಕ್ತೆ ಚಂಡಮಾರುತ ಅಪ್ಪಳಿಸುವ ಭೀತಿಯಲ್ಲಿ ಪೂರ್ವನಿಯೋಜನೆಗೊಂಡಿರುವ ಕೋಸ್ಟ್ ಗಾರ್ಡ್ಸ್ ತಂಡ ಲಕ್ಷದ್ವೀಪದ ಪಶ್ವಿಮ ಕರಾವಳಿ ಭಾಗದಲ್ಲಿ ತಯಾರಿ ಪ್ರಾರಂಭಿಸಿದೆ.

ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮೇ.17-18 ಗುಜರಾತ್​ನ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದ್ದು, ಕೆಲವೊಂದು ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ.
ಚಂಡಮಾರುತದ ವಿರುದ್ಧ ಹೋರಾಟ ನಡೆಸಲು ಇಂಡಿಯನ್​ ಕೋಸ್ಟ್​ ಗಾರ್ಡ್​ ಸನ್ನದ್ಧವಾಗಿದ್ದು, 40 ಕೋಸ್ಟ್​ ಗಾರ್ಡ್​ ವಿಪತ್ತು ಪರಿಹಾರ ತಂಡ ಸಿದ್ಧಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!