ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ತೀವ್ರ ಸ್ವರೂಪದಲ್ಲಿರುವ ತೌಕ್ತೆ ಚಂಡಮಾರುತ ಸೋಮವಾರ ತಡರಾತ್ರಿ ಗುಜರಾತ್ ಗೆ ಅಪ್ಪಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ದಕ್ಷಿಣ ಕೇರಳ, ಕರ್ನಾಟಕ ಕರಾವಳಿ ಮೂಲಕ ಮಹಾರಾಷ್ಟ್ರ ಪ್ರವೇಶಿಸಿದ ತೌಕ್ತೆ ಚಂಡಮಾರುತ ಇದೀಗ ಗುಜರಾತ್ ನಲ್ಲಿ ತನ್ನ ಆರ್ಭಟ ಪ್ರಾರಂಭಿಸಿದೆ.
ತಡರಾತ್ರಿ ಗುಜರಾತ್ ನ ಸೌರಾಷ್ಟ್ರಕ್ಕೆ ಪ್ರವೇಶಿಸಿದ ತೌಕ್ತೆ ಅನೇಕ ಕರಾವಳಿ ಪ್ರದೇಶಗಳಲ್ಲಿ ಮಳೆಯ ಆರ್ಭಟ ಹೆಚ್ಚಿಸಿದೆ. ಈ ವೇಳೆ ಗಾಳಿ ಗಂಟೆಗೆ 185 ಕಿ.ಮೀ ವೇಗ ಪಡೆದುಕೊಂಡಿದ್ದು, ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ.
ಮಳೆ, ಗಾಳಿಯ ರಬಸಕ್ಕೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಡಿತವಾಗಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಪ್ರಕಾರ, ಕರಾವಳಿ ಜಿಲ್ಲೆಗಳಾದ ಅಮ್ರೇಲಿ, ಜುನಾಗಢ್, ಗಿರ್-ಸೋಮನಾಥ್ ಮತ್ತು ಭಾವನಗರ್ ಚಂಡಮಾರುತದ ಪ್ರಮಾಣ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸದ್ಯ ಗುಜರಾತ್ ಚಂಡಮಾರುತ್ತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡವರ ಬಗ್ಗೆ ವರದಿಯಾಗಿಲ್ಲ.